ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗ್ತಿದೆ.ಆರೋಗ್ಯ ಸಚಿವ ದಿನೇಶ್ ಗುಂಡ್ ರಾವ್ ಅವರಿಂದ ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಗಿದೆ.
ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲಾಗಿದ್ದು,ಡೆಂಗ್ಯೂ ಪ್ರಕರಣಗಳನ್ನು ತಡೆಯುವ ಹಾಗೂ ಇನ್ನಿತರೆ ಆರೋಗ್ಯ ವಿಷಯದ ಚರ್ಚೆ ನಡೆಸಲಾಗಿದೆ.ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯ ಆರೋಗ್ಯ ಅಧಿಕಾರಿಗಳು ಬಾಗಿಯಾಗಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರೊಗ್ಯ ಸಚಿವ ದಿನೇಶ್ ಗುಂಡುರಾವ್ ಸಭೆ ನಡೆಸಿದ್ದು,ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗ್ತಿದೆ
ಬಿಬಿಎಂಪಿ ಅಲ್ಲಿ ಡೆಂಘೀ ಅಬ್ಬರ ನೋಡೋದಾದ್ರೆ
ಕಳೆದ ಜನವರಿಯಿಂದ ಸೆಪ್ಟೆಂಬರ್ 7 ನೇ ದಿನಾಂಕದವರೆಗೂ 4926 ಡೆಂಘಿ ಪ್ರಕರಣ ಪತ್ತೆಯಾಗಿದೆ.
ಡೆಂಘೀ ವಲಯವಾರು ಪ್ರಕರಣ
ಬೊಮ್ಮನಹಳ್ಳಿ 272
ದಾಸರಹಳ್ಳಿ 73
ಬೆಂಗಳೂರು ಪೂರ್ವ ವಲಯ 1218
ಮಹದೇವಪುರ 875
ಆರ್ ಆರ್ ನಗರ 457
ಬೆಂಗಳೂರು ದಕ್ಷಿಣ 1003
ಬೆಂಗಳೂರು ಪಶ್ಚಿಮ 635
ಯಲಹಂಕ 393
ಒಟ್ಟೂ 4926 ಡೆಂಘೀ ಪ್ರಕರಣ ಬೆಂಗಳೂರಿನಲ್ಲಿ ಸ್ಫೋಟಗೊಂಡಿದೆ.