ಕಾರವಾರ : ಪುಟ್ಟ ಗಂಡುಮಗುವಿನೊಂದಿಗೆ ರಾಕ್ಷಸತನ ಮೆರೆದು ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗೆ ಕಾರವಾರದ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿಣಿ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತಿದ್ದ ವನ್ನಳ್ಳಿಯ ಆರೋಪಿ ಖಾಸಿಂ (28) ಎಂಬಾತ ತಮ್ಮ ಪರಿಚಿತ ವ್ಯಕ್ತಿಯ 6 ವರ್ಷದ ಗಂಡುಮಗುವಿನ ಮೇಲೆ ದೈಹಿಕ ಸಂಭೋಗ ನಡೆಸಿ ರಾಕ್ಷಸತನ ಮೆರೆದಿದ್ದಾನೆ.
ಆಟವಾಡುತಿದ್ದ ಸಮಯದಲ್ಲಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ. ಮಗುವು ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡು ಕೃತ್ಯ ಬೆಳಕಿಗೆ ಬಂದಿದೆ.
ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಖಾಸಿಂಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ.