Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

6ನೇ ತರಗತಿಯಿಂದ ಶಾಲೆಗಳ ಆರಂಭದ ಅನುಭವ ಆಧಾರದ ಮೇಲೆ 1ನೇ ತರಗತಿಯಿಂದ ಆರಂಭಕ್ಕೆ ನಿರ್ಧಾರ: ಬಿ ಸಿ ನಾಗೇಶ್

6ನೇ ತರಗತಿಯಿಂದ ಶಾಲೆಗಳ ಆರಂಭದ ಅನುಭವ ಆಧಾರದ ಮೇಲೆ 1ನೇ ತರಗತಿಯಿಂದ ಆರಂಭಕ್ಕೆ ನಿರ್ಧಾರ: ಬಿ ಸಿ ನಾಗೇಶ್
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (14:04 IST)
ಬೆಂಗಳೂರು : ರಾಜ್ಯದ ಕೆಲವು ಕುಗ್ರಾಮ, ಹಳ್ಳಿಗಳಲ್ಲಿ ಶೂನ್ಯ ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು ಅಂತಹ ಕಡೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವಂತೆ ಸಾರ್ವಜನಿಕರು, ಶಿಕ್ಷಕರು, ಪೋಷಕರು ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಇಂದು 6ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಮೂರು ದಿನ ಶಾಲೆಗಳನ್ನು ನಡೆಸಿದ ನಂತರ ಮತ್ತೆ ಮೂರು ದಿನ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಜೆ ಸಿಗುತ್ತಿದೆ, ಆಗ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಂದ ನಮಗೆ ಅಭಿಪ್ರಾಯಗಳು ಸಿಗುತ್ತವೆ. ಅವೆಲ್ಲವನ್ನೂ ತೆಗೆದುಕೊಂಡು ಮುಂದಿನ ಸೋಮವಾರದಿಂದ ಮುಂದಿನ ಯೋಜನೆ ರೂಪಿಸುತ್ತೇವೆ. ಶಾಲೆಗಳ ಪುನರಾರಂಭಕ್ಕೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಶಿಕ್ಷಣ ಅಧಿಕಾರಿಗಳು, ಗ್ರಾಮ ಪಂಚಾಯತಿಯಿಂದ ಹಿಡಿದು ಮಹಾನಗರವರೆಗೆ ನಮಗೆ ಸಹಕಾರ ಸಿಕ್ಕಿದೆ. ಇದುವರೆಗೆ ರಾಜ್ಯದಲ್ಲಿ ಶೇಕಡಾ 98ಕ್ಕಿಂತ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿರುವುದರಿಂದ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಚೆನ್ನಾಗಿ ಹೋಗಿ ಮುಂದಿನ ದಿನಗಳಲ್ಲಿ ತರಗತಿಗಳನ್ನು ಸರಾಗವಾಗಿ ನಡೆಸಿಕೊಂಡು ಹೋಗಬಹುದು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಮತ್ತೆ ತಾಂತ್ರಿಕ ಸಮಿತಿಯ ಮೊರೆ: ಶಾಲೆಗಳು ಪುನರಾರಂಭವಾದ ನಂತರ ಕೆಲವು ದಿನಗಳ ನಂತರ ಮತ್ತೆ ತಾಂತ್ರಿಕ ಸಲಹಾ ಸಮಿತಿಯ ಮೊರೆ ಹೋಗಿ ಅವರ ಸಲಹೆ-ಸೂಚನೆಗಳನ್ನು ಕೇಳಿಕೊಂಡು ಅದರಂತೆ ನಿರ್ಧಾರ ಕೈಗೊಳ್ಳಲಾಗುವುದು. ಪ್ರಸ್ತುತ ರಾಜ್ಯದ ಮೂರು ಜಿಲ್ಲೆಗಳಲ್ಲಿ ಬಿಟ್ಟರೆ ಬೇರೆಲ್ಲಿಯೂ ಕೊರೋನಾ ಆತಂಕಗೊಳ್ಳುವ ಸ್ಥಿತಿಯಲ್ಲಿಲ್ಲ. ಅಕ್ಟೋಬರ್ ಕೊನೆ ಮತ್ತು ನವೆಂಬರ್ ಆರಂಭದಲ್ಲಿ ಮೂರನೇ ಅಲೆ ಬರುವ ನಿರೀಕ್ಷೆಯಿರುವುದರಿಂದ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮತ್ತು 6ರಿಂದ 12ನೇ ತರಗತಿಯವರೆಗೆ ಶಾಲೆಗಳು ನಡೆಸಿದ ಅನುಭವಗಳ ಆಧಾರದ ಮೇಲೆ 1ನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಸೇರಿದಂತೆ ಬೇರೆ ಕಾರಣಗಳಿಂದಲೂ ಶಿಕ್ಷಕರ ನೇಮಕಾತಿ ಮಾಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳನ್ನು ಕೇಳಿಕೊಂಡಾಗ ಅವರು 5 ಸಾವಿರ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಯಾವ ತರಗತಿಗೆ ಎಷ್ಟು ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಗಣೇಶೋತ್ಸವಕ್ಕೆ ಒಪ್ಪಿಗೆ, ಷರತ್ತು ಅನ್ವಯ