ಗರ್ಬಾ ಗುಜರಾತ್ ಸಂಸ್ಕೃತಿಯಾದರೂ ದೇಶದ ಹಲವು ರಾಜ್ಯಗಳಲ್ಲಿ ಗರ್ಬಾ ನೃತ್ಯದ ಮೂಲಕ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಹೀಗೆ ಮುಂಬೈನ ಪಲ್ಗಾರ್ ಜಿಲ್ಲೆಯ ವಿರಾರ್‌ನಲ್ಲಿ ರಾತ್ರಿ ಆಯೋಜಿಸಿದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ 35 ಹರೆಯದ ಮನೀಶ್ ನರಾಪ್ಜಿ ಸೋನಗ್ರ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾನೆ.
ಮನೀಶ್ ನೃತ್ಯ ಮಾಡುತ್ತಲೇ ಅಸ್ವಸ್ಥರಾಗಿದ್ದಾರೆ. ಆದರೆ ನೃತ್ಯದ ನಡುವೆ ಯಾರೂ ಮನೀಶ್ ಗಮನಿಸಲಿಲ್ಲ. ಕೆಲ ಹೊತ್ತಲ್ಲೇ ತೀವ್ರ ಅಸ್ವಸ್ಥಗೊಂಡ ಮನೀಶ್ ನೃತ್ಯ ಮಾಡುತ್ತದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮನೀಶ್ ಎಬ್ಬಿಸಲು ಕೆಲವರು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮನೀಶ್ ತಂದೆಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ಹೀಗಾಗಿ ತಡಮಮಾಡದೇ ಪುತ್ರನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.
ತುರ್ತು ಚಿಕಿತ್ಸಾ ಘಟಕ್ಕೆ ದಾಖಲಿಸಿದ ತಂದೆ ಚಿಂತಾಕ್ರಾಂತರಾಗಿದ್ದರು. ಇತ್ತ ಮನೀಶ್ ತಪಾಸಣೆ ನಡೆಸಿದ ವೈದ್ಯರು ಆಸ್ಪತ್ರೆ ದಾಖಲಿಸುವ ಮುನ್ನವೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಮಾಹಿತಿಯನ್ನು ಮನೀಶ್ ತಂದೆಗೆ ಆಸ್ಪತ್ರೆ ಸಿಬ್ಬಂಧಿಗಳು ನೀಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಮನೀಶ್ ತಂದೆಗೆ ಆಘಾತವಾಗಿದೆ. ಮಗನ ಸಾವಿನ ಸುದ್ದಿ ಕೇಳಿದ ತಂದೆ ಶಾಕ್‌ನಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ತುರ್ತು ಚಿಕಿತ್ಸಾ ಘಟಕದ ಮುಂದೆ ಕುಸಿದ ಬಿದ್ದ ತಂದೆಯ ನೆರವಿಗೆ ವೈದ್ಯರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಮನೀಶ್ ತಂದೆಯ