ಬೆಳಗಾವಿ : ನೆರೆ ಪರಿಹಾರ ಸಿಗದೆ ರೈತರು ಪರದಾಡುತ್ತಿರುವಾಗ, ರಾಜ್ಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಸಿಎಂ ಲಕ್ಷ್ಮಣ್ ಸವದಿ ನೆರೆ ಪರಿಹಾರದ ಬಗ್ಗೆ ಉಡಾಫೆ ಉತ್ತರ ನೀಡಿ ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಇನ್ನು ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಹಿನ್ನಲೆಯಲ್ಲಿ ರೈತರ ಮುಖಂಡನೊಬ್ಬ ಸಿಎಂ ವಿರುದ್ದ ಗರಂ ಆಗಿ, 1 ಎಕರೆ ಬೆಳೆ ನಷ್ಟಕ್ಕೆ 50 ಸಾವಿರದಿಂದ 1 ಲಕ್ಷ ರೂ. ವರೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಆಗ ಡಿಸಿಎಂ ಲಕ್ಷ್ಮಣ ಸವದಿ ಮಧ್ಯಪ್ರವೇಶಿಸಿ, ನನ್ನದು 100 ಎಕರೆ ಜಮೀನಿದೆ. ಅಷ್ಟಕ್ಕೂ ಪರಿಹಾರ ಕೊಟ್ಟರೆ ಒಂದು ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ರೈತರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.