ಹುಣಸಮಾರನಹಳ್ಳಿಯಲ್ಲಿರುವ ಜಂಗಮ ಮಠದಲ್ಲಿ ದಯಾನಂದ ಸ್ವಾಮಿ ಕಾಮದಾಟ ಬಹಿರಂಗವಾಗಿದ್ದು ಭಕ್ತರು ತೀವ್ರ ಆಕ್ರೋಶಗೊಂಡ ಘಟನೆ ವರದಿಯಾಗಿದೆ.
ಇತಿಹಾಸ ಪ್ರಸಿದ್ದ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎನ್ನಲಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿದೆ.
ದಯಾನಂದ ನಟಿ ಎನ್ನುವ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ಬಟಾ ಬಯಲಾಗಿವೆ. ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಶಿವಾಚಾರ್ಯ ಸ್ವಾಮಿಜಿ ಪುತ್ರನಾದ ದಯಾನಂದ ಮಠವನ್ನು ಅನೈತಿಕ ಚಟುವಟಿಕೆಯ ತಾಣವಾಗಿ ಪರಿಗಣಿಸಿದ್ದ ಎನ್ನಲಾಗಿದೆ. ದಯಾನಂದ ಸ್ವಾಮಿಯ ಕಾಮಲೀಲೆ ಬಹಿರಂಗವಾಗುತ್ತಿದ್ದಂತೆ ಗ್ರಾಮಸ್ಥರು ಮಠದ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದು, ದಯಾನಂದ ಸ್ವಾಮಿಯನ್ನು ಕೂಡಲೇ ಪೊಲೀಸರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಕಾಮಿ ದಯಾನಂದ ಸ್ವಾಮಿಜಿ ಪರ ಬ್ಯಾಟಿಂಗ್ ನಡೆಸಲು ಆಗಮಿಸಿದವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಹಲ್ಲೆ ನಡೆಸಲು ಕೂಡಾ ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.