ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ರಾಜಕೀಯದಲ್ಲಿ ಮುಖಂಡರು ವಾಕ್ಸಮರ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ಧರಾಮಯ್ಯನವರು ವೀರ ಸಾವರಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.ಅವರಿಗೆ ಗಟ್ಸ್ ಇದ್ದರೆ ಅಂಬೇಡ್ಕರ್ ಗೆ ಮೊದಲೇ ಭಾರತ ರತ್ನ ಕೊಡಿ ಅಂತಾ ಕೇಳಬೇಕಿತ್ತು. ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವ ಗಾಂಧಿಯವರಿಗೆ ಕೊಡಲಾಯಿತು. ಅವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಬಳುವಳಿಯಾಗಿ ಕೊಡಲಾಯಿತು. ಹೀಗಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರಿಗೆ ಗೌರವ ಕೊಡಲಿಲ್ಲ. ದೇಶಕಂಡ ಅಪ್ರತಿಮ ವೀರಸಾವರ್ ಕರ್ ಅವರ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ. ಸಿದ್ಧರಾಮಯ್ಯ ಅವರ ಈ ನಡೆಯನ್ನ ನಾನು ಖಂಡಿಸುತ್ತೇನೆ ಎಂದ್ರು.
ಮುಂದೆ ದಾವುದ್ ಇಬ್ರಾಹಿಂ ಗೂ ಕಾಂಗ್ರೆಸ್ ನವರು ಭಾರತ ರತ್ನ ಕೊಡಲಿದ್ದಾರೆಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ರು.
ಸಿದ್ಧರಾಮಯ್ಯ ಅವರು ಮೊದಲು ಇತಿಹಾಸವನ್ನ ಸರಿಯಾಗಿ ಓದಿಕೊಂಡು ಮಾತನಾಡಲಿ ಅಂತ ಹರಿಹಾಯ್ದರು.