Webdunia - Bharat's app for daily news and videos

Install App

ತಾಯಿಗೆ ಚೂರಿ ಇರಿದ ಮಗಳು!

Webdunia
ಭಾನುವಾರ, 12 ಜೂನ್ 2022 (15:18 IST)
ಧಾರವಾಡ : ಪ್ರಿಯಕರನ ಜೊತೆ ಸೇರಿ ಮಗಳು ತಾಯಿಗೆ ಚೂರಿ ಇರಿದ ಘಟನೆ ಧಾರವಾಡದ  ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟ್ನಲ್ಲಿ ನಡೆದಿದೆ.

ಪ್ರಿಯಕರ ಹಾಗೂ ಮಗಳು ಸೇರಿ ತಾಯಿ ಜೀಜಾಬಾಯಿ ಮೇಲೆ  ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪ್ರಿಯಕರ ಕಿರಣ್  ಹಾಗೂ ಮಗಳು ಸ್ಫೂರ್ತಿ ಸೇರಿ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.

ಹಲವು ವರ್ಷಗಳಿಂದ ಕಿರಣ ಹಾಗೂ ಜೀಜಾಬಾಯಿ ಮಗಳು ಸ್ಫೂರ್ತಿ ಪ್ರೀತಿಸುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಕಿರಣ ಜೊತೆ ಮಗಳು ಸ್ಫೂರ್ತಿ ಓಡಿ ಹೋಗಿದ್ದಳು.

ಈ ಹಿನ್ನೆಲೆಯಲ್ಲಿ ಕಿರಣ ಮೇಲೆ ಜೀಜಾಬಾಯಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಕಳೆದ 2 ತಿಂಗಳಿಂದ ಸ್ಫೂರ್ತಿ ರಿಮ್ಯಾಂಡ್ ಹೋಮ್ ನಲ್ಲಿದ್ದರು, ಇತ್ತ  ಕಿರಣ್ ಕೂಡಾ ಎರಡು ತಿಂಗಳಿಂದ ಜೈಲಿನಲ್ಲಿದ್ದು ಬೇಲ್ ಮೇಲೆ ಹೊರಗೆ ಬಂದಿದ್ದ.

ಮಧ್ಯರಾತ್ರಿ 2.45 ರ ಸುಮಾರಿಗೆ ಜೀಜಾಬಾಯಿ ಮನೆಗೆ ನುಗ್ಗಿ ಕಿರಣ್ ಚಾಕು ಇರಿದಿದ್ದಾನೆ.ಕಣ್ಣು ಬಿಟ್ಟು ನೋಡಿದಾಗ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ನೋಡಿ ಜೀಜಾಬಾಯಿ ಕಂಗಾಲಾಗಿದ್ದಾರೆ.  ಜೀಜಾಬಾಯಿ ಎಚ್ಚರಗೊಳ್ಳುತ್ತಿದ್ದ ಹಾಗೆ ಇಬ್ಬರು ಎಸ್ಕೇಪ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments