Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕನ್ನಡ ರಂಗಭೂಮಿಯ ಕರಾಳ ದಿನ: ಉಮಾಶ್ರೀ

ಕನ್ನಡ ರಂಗಭೂಮಿಯ ಕರಾಳ ದಿನ: ಉಮಾಶ್ರೀ
ಬೆಂಗಳೂರು , ಸೋಮವಾರ, 10 ಜೂನ್ 2019 (21:12 IST)
ಕನ್ನಡ ರಂಗಭೂಮಿಯ ದಿಗ್ಗಜರಲ್ಲೊಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಉಮಾಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ .

ಅವರ ಸಾವಿನ ಸುದ್ದಿ  ಆಘಾತಕಾರಿಯಾಗಿದ್ದು ಇದು ಕನ್ನಡ ರಂಗಭೂಮಿಯ ಕರಾಳ ದಿನ ಎಂದು  ನಾನು ಭಾವಿಸಿದ್ದೇನೆ ಎಂದು ಕನ್ನಡ ಹಿರಿಯ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ  ಹೇಳಿದ್ದಾರೆ.

 ನಾನು ಸ್ವತಃ ಅವರ ಯಯಾತಿ ನಾಟಕದಲ್ಲಿ ನಟಿಸಿದ್ದೆ. ಆರ್. ನಾಗೇಶ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಅದರಲ್ಲಿ ನಾನು ಶರ್ಮಿಷ್ಠೆ ಯಾಗಿ ಅಭಿನಯಿಸಿದ್ದು , ನನಗೆ ಕಾರ್ನಾಡ್  ಅವರೊಳಗಿದ್ದ ಮಹಿಳಾ ಸಂವೇದನೆಯನ್ನು ಅರಿತುಕೊಳ್ಳಲು ಸಾಧ್ಯವಾಯಿತು. 

webdunia
ಕಾರ್ನಾಡರ ನಾಟಕದಲ್ಲಿ ಅಭಿನಯಿಸುವ ಧನ್ಯತೆ ನನಗೆ ಸಿಕ್ಕಿತು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ .

ಕನ್ನಡ ರಂಗಭೂಮಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಅದ್ಭುತ ನಾಟಕಕಾರ ಡಾ ಕಾರ್ನಾಡ್. ಅವರ ಎಲ್ಲ ನಾಟಕಗಳು ಕನ್ನಡ ರಂಗಭೂಮಿಯ ದಿಕ್ಕು ದೆಸೆಯನ್ನು ಬದಲಿಸಿ ಹೊಸ ದೃಷ್ಟಿಕೋನದಿಂದ ಕಲೆಯನ್ನು ನೋಡುವುದನ್ನು ಕಲಿಸಿದವು.

ಅವರ ಯಯಾತಿ, ತುಘಲಕ್, ತಲೆದಂಡ, ಅಗ್ನಿ ಮತ್ತು ಮಳೆ, ಒಡಕಲು ಬಿಂಬ, ಹಯವದನ, ಟಿಪ್ಪುವಿನ ಕನಸುಗಳು ಮುಂತಾದ ನಾಟಕಗಳು ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದವು. ತುಘಲಕ್, ನಾಗಮಂಡಲ ಮತ್ತು ತಲೆದಂಡ ಅವರು ಸಾರ್ವಕಾಲಿಕ ಶ್ರೇಷ್ಠ ನಾಟಕ ಎಂದು ರಂಗ ಜಗತ್ತು ಕೊಂಡಾಡಿದೆ. 

ಗಿರೀಶ್ ಕಾರ್ನಾಡ್ ಶ್ರೇಷ್ಠ ನಾಟಕಗಾರ ಜೊತೆಗೆ ಶ್ರೇಷ್ಠ ನಟರು, ನಿರ್ದೇಶಕರು ಆಗಿದ್ದರು.  ವಂಶವೃಕ್ಷ, ಸಂಸ್ಕಾರ, ತಬ್ಬಲಿ ನೀನಾದೆ ಮಗನೇ, ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ ಮುಂತಾದ  ಚಿತ್ರಗಳು ಅವರ ಸೂಕ್ಷ್ಮ ಸಂವೇದನೆ ಮತ್ತು ಪ್ರಗತಿಪರ ದೃಷ್ಟಿಕೋನದ ಮೂಲಕ ರಾಷ್ಟ್ರದ ಚಲನಚಿತ್ರ ರಂಗ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದವು ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ