ಉಪಚುನಾವಣೆ ಬಳಿಕ ಇದೀಗ ಲೋಕಸಭೆ ಫಲಿತಾಂಶದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಪಕ್ಷದ ಶಾಸಕಾಂಗ ಸಭೆ ಕರೆಯುವ ಮೂಲಕ ದೋಸ್ತಿ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ಲಾನ್ ಹೆಣೆಯಲಿದೆ ಎನ್ನಲಾಗಿದೆ.
ಮೈತ್ರಿ ಸರಕಾರ ಪತನವಾಗುತ್ತದೆ. ಕೈ ಪಡೆಯ 20 ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದೆಲ್ಲ ಬಿಜೆಪಿ ಮುಖಂಡರು ಹೇಳಿಕೊಂಡಿದ್ದರು. ಅಲ್ಲದೇ 23 ರ ನಂತರ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗುತ್ತದೆ ಎಂದೆಲ್ಲ ಹೇಳಿದ್ರು.
ಹೀಗಾಗಿ ಶಾಸಕರಲ್ಲಿ ಬಿಜೆಪಿ ಶಾಸಕರಲ್ಲಿ ಒಗ್ಗಟ್ಟು ಕಾಪಾಡುವುದಕ್ಕಾಗಿ ಮತ್ತು ಅವರಿಗೆ ಸೂಚನೆ ನೀಡುವುದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಮತ್ತೆ ಆಪರೇಷನ್ ಕಮಲ ನಡೆದರೆ ಅದಕ್ಕ ಪ್ರತೀಕಾರವಾಗಿ ನಾವು ಅದಕ್ಕೆ ಸಿದ್ಧ ಎಂದು ಮೈತ್ರಿ ಪಕ್ಷಗಳು ಎಚ್ಚರಿಕೆ ನೀಡಿವೆ. ಈ ನಡುವೆ ಬಿಜೆಪಿ ನಡೆಸುತ್ತಿರುವ ಸಭೆ ಕುತೂಹಲ ಕೆರಳಿಸಿದೆ.