Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಣೆಕಟ್ಟು ಧ್ವಂಸ ಸಂಚು: ಶಂಕಿತ ನಕ್ಸಲ್ ಬಂಧನ

ಆಣೆಕಟ್ಟು ಧ್ವಂಸ ಸಂಚು: ಶಂಕಿತ ನಕ್ಸಲ್ ಬಂಧನ
ರಾಮನಗರ , ಮಂಗಳವಾರ, 7 ಆಗಸ್ಟ್ 2018 (16:24 IST)
ನಾಡಿನ ದೇಗುಲಗಳು, ಪ್ರವಾಸಿ ತಾಣಗಳು ಹಾಗೂ ಆಣೆಕಟ್ಟೆಗಳನ್ನ ಧ್ವಂಸ ಮಾಡುಲು ಸಂಚು ರೂಪಿಸುತ್ತಿದ್ದ ಎನ್ನಲಾದ ಶಂಕಿತ ನಕ್ಸಲ್ ನನ್ನ ದೆಹಲಿಯ ಎನ್ ಐಎ ಹಾಗೂ ಐಬಿ ಪೊಲೀಸರು ರೇಷ್ಮೆನಗರಿ ರಾಮನಗರದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ. ಜಾರ್ಖಾಂಡ್ ಮೂಲದ ಮುನೀರ್  ಬಂಧಿತ ನಕ್ಸಲೈಟ್.

ಈತ ರಾಮನಗರದ ಟ್ರೂಪ್ ಲೈನ್ ನಲ್ಲಿ ಅಮೀರ್ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ. ಬಂಧಿತ ಮುನೀರ್ ನಿಂದ ಲ್ಯಾಪ್‌ಟಾಪ್, ಜಿಲೆಟಿನ್ ಪುಡಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗ್ತಿದೆ. ರಾಜ್ಯದ ಹಲವು ದೇಗುಲಗಳ ಚಿತ್ರ, ಪ್ರವಾಸಿ ತಾಣ, ಮಸೀದಿಗಳ ಚಿತ್ರಗಳು, ಮ್ಯಾಪ್ ಗಳನ್ನ ಶಂಕಿತ ನಕ್ಸಲ್ ನಿಂದ ವಶಪಡಿಕೊಳ್ಳಲಾಗಿದೆ. ರಾಜ್ಯದಲ್ಲಿ ವಿದ್ವಂಸಕ ಕೃತ್ಯ ನಡೆಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದ ಮುನೀರ್,

ಬಟ್ಟೆ ವ್ಯಾಪಾರದ ಸೋಗು ಹಾಕಿದ್ದ. ಈತ 50 ಸಾವಿರ ಅಡ್ವಾನ್ಸ್ ಹಾಗೂ 5 ಸಾವಿರ ಬಾಡಿಗೆಗೆ ಮನೆಯನ್ನ ಪಡೆದಿದ್ದ. ಅದರಂತೆ 45 ಸಾವಿರ ಹಣವನ್ನ ಮುಂಗಡವಾಗಿ ನೀಡಿದ್ದ.



Share this Story:

Follow Webdunia kannada

ಮುಂದಿನ ಸುದ್ದಿ

ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ: ತಮಿಳುನಾಡಿನಾದ್ಯಂತ ಕಟ್ಟೆಚ್ಚರ