ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿ ಅವರದಲ್ಲವೆಂದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದ್ದರಿಂದ ಬಿಜೆಪಿಯವರ ಬಂಡವಾಳ, ಸುಳ್ಳುಪ್ರಚಾರ ಬಹಿರಂಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ನಕಲಿ ಡೈರಿಯ ಬಗ್ಗೆ ಪ್ರಸ್ತಾಪಿಸುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಇದೀಗ ಎಫ್‌ಎಸ್‌ಎಲ್ ವರದಿ ಬಹಿರಂಗವಾಗಿರುವುದರಿಂದ ಮುಖಭಂಗವಾಗಿದೆ ಎಂದು ಗುಡುಗಿದ್ದಾರೆ.
ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿಯಲ್ಲಿರುವ ಬರಹಗಳು ಗೋವಿಂದರಾಜು ಅವರಿಗೆ ಸೇರಿದ್ದಲ್ಲ ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ನೀಡಿದ್ದಾರೆ.
ಡೈರಿಯಲ್ಲಿ ಹೈಕಮಾಂಡ್‌ಗೆ ನೀಡಿದ ಕಪ್ಪ ಸೇರಿದಂತೆ ಸ್ಟೀಲ್ ಬ್ರಿಡ್ಜ್‌ನಲ್ಲೂ ಸಿಎಂ ಕುಟುಂಬಕ್ಕೆ 69 ಕೋಟಿ ರೂಪಾಯಿ ಹಣ ಸಂದಾಯವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದೀಗ ವರದಿ ಬಹಿರಂಗವಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ನೆಮ್ಮದಿ ಆವರಿಸಿದ್ದರೆ, ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.