Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾಲುಣಿಸುವ ತಾಯಿಯ ಆಹಾರ ಕ್ರಮ ಹೇಗಿರಬೇಕು? ಇಲ್ಲಿವೆ ಟಿಪ್ಸ್

ಹಾಲುಣಿಸುವ ತಾಯಿಯ ಆಹಾರ ಕ್ರಮ ಹೇಗಿರಬೇಕು? ಇಲ್ಲಿವೆ ಟಿಪ್ಸ್
bangalore , ಶುಕ್ರವಾರ, 6 ಆಗಸ್ಟ್ 2021 (20:50 IST)
ಈಗಷ್ಟೆ ಜನಿಸಿದ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಎಷ್ಟು ಮುಖ್ಯವೋ ತಾಯಿಯ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವನೆಯೂ ಅಷ್ಟೇ ಮುಖ್ಯ. ಮಗುವಾದ ಬಳಿಕ ತಾಯಿ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡು, ಮಗುವಿನಂತೆ ಈಗಷ್ಟೇ ಜನಿಸಿದವಳಂತೆ ಅವಳ ದೇಹ ಸೊರಗಿರುತ್ತದೆ. ಹೀಗಾಗಿ ತಾಯಿಯ ದೇಹಕ್ಕೆ ಪೌಷ್ಠಿಕ ಆಹಾರ ನೀಡುವುದು ಹೆಚ್ಚು ಮುಖ್ಯ.  ಆದರೆ, ಯಾವ ರೀತಿಯ ಆಹಾರ ಸೇವನೆ ಮಾಡಬೇಕು, ಪೌಷ್ಠಿಕ ಮಟ್ಟ ಎಷ್ಟಿರಬೇಕು ಎಂಬ ಬಗ್ಗೆ ವಿಶ್ವ ಸ್ತನ್ಯಪಾನದ ವಾರದ ವಿಶೇಷವಾಗಿ ಕೆಲವು ಟಿಪ್ಸ್ ಇಲ್ಲಿವೆ..
 
** ಹಾಲುಣಿಸುವ ತಾಯಿಯ ದೇಹವು ೫೦೦ ಕಿಲೋ ಕ್ಯಾಲೋರಿಯಷ್ಟು ಪೌಷ್ಠಿಕಾಂಶವನ್ನು ಬಯಸುತ್ತದೆ. ಹೀಗಾಗಿ ಪ್ರೋಟಿನ್, ವಿಟಮಿನ್, ಕಬ್ಬಿಣಾಂಶಯುಕ್ತ ಆಹಾರ ಮತ್ತು ಕ್ಯಾಲ್ಸಿಯಂ ಭರಿತ ಆಹಾರವನ್ನು ಹೆಚ್ಚು ಸೇವಿಸಬೇಕು,
** ಆಹಾರದಲ್ಲಿ ಪ್ರಮುಖವಾಗಿ ಬಗೆಬಗೆಯ ಬೇಳೆ ಕಾಳುಗಳು, ದಿನಸಿ, ಸಿರಿಧಾನ್ಯಗಳು, ದ್ವಿದಳದಾನ್ಯಗಳು, ಡ್ರೆöÊ ಫ್ರೂಟ್ಸ್, ತಾಜಾ ಹಣ್ಣು, ತರಕಾರಿಗಳು, ಮೊಟ್ಟೆ, ಚಿಕನ್ ನಂತಹ ಹಎಚ್ಚಿನ ಪ್ರೋಟಿನ್ ಅಂಶವಿರುವ ಆಹಾರವನ್ನು ದಿನಕ್ಕೆ ೨-೩ ಬಾರಿ ಸೇವನೆ ಒಳ್ಳೆಯದು. ಇದರಿಂದ ತಾಯಿಯ ದೇಹದ ಬೆಳವಣಿಗೆ ಸುಧಾರಿಸುವುದಲ್ಲದೇ, ಮಗುವಿಗೆ ಸಮಪ್ರಕವಾಗಿ ಹಾಲುಣಿಸಲು ಸಾಧ್ಯವಾಗಲಿದೆ.
** ದಿನಕ್ಕೆ ಕನಿಷ್ಠ ೮ ಗ್ಲಾಸ್ (ನಾಲ್ಕರಿಂದ-ಐದು ಲೀಟರ್) ನೀರು ಸೇವನೆ ಮುಖ್ಯ. ಜೊತೆಗೆ ಎಳನೀರಿನಂಥ ತಾಜಾ ಪಾನೀಯ ಸೇವನೆ ಒಳ್ಳೆಯದು.
** ಕೆಲವು ಆಹಾರ ಪದ್ಧತಿಗಳು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಹೀಗಾಗಿ ತಾಯಿ ಏನೇ ಆಹಾರ ಸೇವನೆ ಮಾಡಿದರೂ ಮಗುವಿಗೆ ಹೊಂದಾಣಿಕೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. 
** ಮಗು ಜನಿಸಿದ ಮೂರು ತಿಂಗಳವರೆಗೆ ತಾಯಿಯಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಕೊರತೆ ಹೆಚ್ಚು ಕಾಡುತ್ತದೆ. ಹೀಗಾಗಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರವನ್ನು ಕನಿಷ್ಠ ೩ ತಿಂಗಳುಗಳ ಕಾಲ ಹೆಚ್ಚು ಸೇವನೆ ಒಳ್ಳೆಯದು.
** ಮಗುವಿನ ಮೆದುಳಿನ ಬೆಳವಣಿಗೆಗೆ ಒಮೆಗಾ ೩ ಕೊಬ್ಬಿನ ಆಮ್ಲ ಮುಖ್ಯವಾಗಿದೆ. ಹೀಗಾಗಿ ವಾರಕ್ಕೆ ಕನಿಷ್ಠ ಮೂರು ದಿನಗಳಾದರೂ ಮೀನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು, ಅದರಲ್ಲೂ ಸಾಲ್ಮನ್, ಬ್ಲುಫಿಶ್, ಟ್ರೌಟ್, ಫ್ಲೌಂಡರ್ ಮತ್ತು ಟ್ಯೂನ ಮೀನಗಳನ್ನು ಮಾತ್ರ ಸೇವನೆ ಮಾಡಬೇಕು.
** ಎದೆಯಲ್ಲಿ ಹಾಲಿನ ಪ್ರಮಾಣ ಹೆಚ್ಚಿಸುವ ಓಟ್‌ಮೀಲ್, ಬೆಳ್ಳುಳ್ಳಿ, ಪಾಲಾಕ್ ಮತ್ತು ಪಪ್ಪಾಯವನ್ನು ಸೇವಿಸಬಹುದು. ಇದು ಆಫೀಸಿಗೆ ತೆರಳುವ ಮಹಿಳೆಯರಿಗೆ ಹೆಚ್ಚು ಉಪಯುಕ್ತ, ಜೊತೆಗೆ ರಕ್ತದೊತ್ತಡ ನಿವಾರಣೆ, ಬೊಜ್ಜು ಕರಗಿಸಲು ಸಹ ಸಹಕಾರಿಯಾಗಿದೆ.
** ಮಾಂಸಹಾರ ಸೇವನೆ ಮಾಡದೇ ಇರುವವರಿಗೆ ಸಸ್ಯಹಾರದಲ್ಲಿಯೇ ಕೆಲವು ಪ್ರೋಟಿಯುಕ್ತ ಆಹಾರ ಸೇವಿಸಬಹುದು. ಡ್ರೈ ಬೀನ್ಸ್, ಡ್ರೈ ಫ್ರೂಟ್ಸ್, ಕಾಳುಗಳ ಸೇವನೆ ಮಾಡಬಹುದು. ಇದಲ್ಲದೆ ಕೆಲವು ಆರೋಗ್ಯಕರ ಆಹಾರ ಸೇವನೆಯಿಂದ ತಾಯಿಯ ಆರೋಗ್ಯದ ಜೊತೆಗೆ ಮಗುವಿಗೆ ಸೂಕ್ತಪ್ರಮಾಣದಲ್ಲಿ ಹಾಲುಣಿಸಲು ತಾಯಿ ಶಕ್ತಳಾಗಿರುತ್ತಾಳೆ..
 
ಏನು ಸೇವನೆ ಮಾಡಬಾರದು?:
 ಗರ್ಭಿಣಿ ಸಂದರ್ಭದಲ್ಲಿ ಪಥ್ಯೆ ಅನುಸರಿಸುವ ಮಹಿಳೆಯರು ಮಗುವಾದ ಬಳಿಕ ಊಟದ ವಿಷಯದಲ್ಲಿ ನಿರ್ಲಕ್ಷö್ಯ ಹೊಂದಿ, ಎಲ್ಲಾ ರೀತಿಯ ಆಹಾರ ಸೇವಿಸಲು ಮುಂದಾಗುತ್ತಾರೆ. ಆದರೆ, ಇದರಿಂದ ಎದೆ ಹಾಲು ಉತ್ಪತ್ತಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆಹಾರ ಸೇವನೆಯ ಕ್ರಮ ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ
** ಮಗುವಿನ ನಿದ್ರೆಯ ಮೇಲೆ ಪರಿಣಾಮ ಬೀರುವುದರಿಂದ ಕಾಫಿ ಅಥವಾ ಕೆಫೀನಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು,
** ಯಾವುದೇ ಆಹಾರವಾಗಲಿ ಮಿತಿ ಮೀರಿ ತಿಂದರೆ ಅದರಿಂದ ಅಲರ್ಜಿ, ಜೀರ್ಣಕ್ರಿಯೆಯಾಗದೇ ಇರುವ ಸಮಸ್ಯೆ ಉಂಟಾಗಬಹುದು. 
** ಹಾಲುಣಿಸುವ ಮಹಿಳೆಯರು ಮದ್ಯಪಾನ, ಧೂಮಪಾನ ಸೇವನೆ ಮಾಡುವುದು ಹೆಚ್ಚು ಅಪಾಯಕಾರಿ. ಜೊತೆಗೆ ಜಂಕ್ ಸೇವನೆ ಪ್ರಮಾಣ ಮಿತಿ ಇದ್ದರೆ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಉತ್ತಮ
** ಕತ್ತಿಮೀನು, ಕಿಂಗ್‌ಮ್ಯಾಕೆರೆಲ್ ಮತ್ತು ಟೈಲ್ಫಿಶ್ ಸೇರಿದಂತೆ ಇತರೆ ಸಮುದ್ರದ ಮೀನುಗಳ ಸೇವನೆ ಒಳ್ಳೆಯದಲ್ಲ. ಏಕೆಂದರೆ, ಇದು ಮಗುವಿನ ನರಮಂಡಲಕ್ಕೆ ಹೆಚ್ಚು ಅಪಾಯ ಉಂಟುಮಾಡಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರಕಲಾ ಪರಿಷತ್ತಿನಲ್ಲಿ ಬೆಂಗಳೂರು ಉತ್ಸವಕ್ಕೆ ಚಾಲನೆ