ಬೆಂಗಳೂರಿನ ರಸ್ತೆಗಳು ಯಾಮಸ್ವರೂಪಿಯಂತೆ ಬಾಯಿತೆರೆದಿದೆ.ಸ್ವಲ್ಪ ಜಾಗೃತೆ ತಪ್ಪಿದ್ರೂ ಅನಾಹುತ ಕಟ್ಟಿಟ್ಟಬುತ್ತಿಯಾಗಿದೆ.ವಾಹನ ಸವಾರರ ಜೀವವನ್ನೇ ಬೆಂಗಳೂರಿನ ರಸ್ತೆಗಳು ಬಲಿಪಡೆಯುತ್ತಿದೆ.ಸಂಪಂಗಿರಾಮನಗರದ ಮುಖ್ಯರಸ್ತೆಯಲ್ಲಿ ಮೋರಿಯ ಸ್ಲ್ಯಾಬ್ ಕುಸಿದಿದೆ.ಸ್ಲ್ಯಾಬ್ ಕುಸಿದು ೧೫ ದಿನಗಳಾದ್ರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.ಸ್ಲ್ಯಾಬ್ ಕುಸಿದ ಜಾಗದಲ್ಲಿ ಕೇವಲ ಒಂದೇ ಬ್ಯಾರಿಕೆಡ್ ಅಳವಡಿಕೆ ಮಾಡಿದ್ದಾರೆ.
ಎಚ್ಚರ ತಪ್ಪಿ ತೆರೆದ ಮೋರಿಗೆ ಬಿದ್ರೂ ಜೀವಕ್ಕೆ ಹಾನಿ ಗ್ಯಾರಂಟಿ.ಸಂಪಂಗಿರಾಮನಗರದಿಂದ ವಿಠಲ್ ಮಲ್ಯ ರಸ್ತೆಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಮೋರಿ ಕುಸಿದಿದ್ದು,ನಿತ್ಯ ಮುಖ್ಯರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಅನಾಹುತಕ್ಕೆ ಆಹ್ವಾನ ಕೊಡುವಂತಿದೆ.