Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಣಿಜ್ಯ ಬ್ಯಾಂಕುಗಳ ಬೆಳೆಸಾಲ ಮನ್ನಾ: ಒಂದೇ ಕಂತಿನಲ್ಲಿ ಬಾಕಿ ಮೊತ್ತ ಬಿಡುಗಡೆಗೆ ಆದೇಶ

ವಾಣಿಜ್ಯ ಬ್ಯಾಂಕುಗಳ ಬೆಳೆಸಾಲ ಮನ್ನಾ: ಒಂದೇ ಕಂತಿನಲ್ಲಿ ಬಾಕಿ ಮೊತ್ತ ಬಿಡುಗಡೆಗೆ ಆದೇಶ
ಬೆಂಗಳೂರು , ಬುಧವಾರ, 12 ಜೂನ್ 2019 (19:33 IST)
ರೈತರು ವಾಣಿಜ್ಯ ಬ್ಯಾಂಕುಗಳಿಂದ ಪಡೆದಿರುವ ಬೆಳೆಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಒಂದೇ ಕಂತಿನಲ್ಲಿ ಉಳಿದ ಮೊತ್ತ  ಬಿಡುಗಡೆಗೆ ಸರಕಾರ ಆದೇಶ ಹೊರಡಿಸಿದೆ.

ಅರ್ಹತೆ ಹೊಂದಿರುವ ರಿಸ್ಟ್ರಕ್ಚರ್ಡ್ ಸಾಲಗಳು, ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲಗಳು ಹಾಗೂ ಪ್ರೋತ್ಸಾಹ ಧನಕ್ಕೆ ಅರ್ಹತೆ ಹೊಂದಿರುವ ಸಾಲಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿ ಸ ರ್ಕಾರ ಮಹತ್ವಪೂರ್ಣ ಆದೇಶ ಹೊರಡಿಸಿದೆ.

ಎನ್ಪಿಎ ಸಾಲಗಳು ಮತ್ತು ದಿನಾಂಕ 1-1-2018 ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಈ ಆದೇಶ ತಿಳಿಸಿದೆ. ಸರ್ಕಾರಿ ಈ ಆದೇಶದೊಂದಿಗೆ ರೈತರಿಗೆ ಬಹಳ ಅನುಕೂಲವಾಗಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜಿಂದಾಲ್ ಪ್ರಕರಣ: ಬಿಜೆಪಿಯಿಂದ ಜೂ. 14, 15 ರಂದು ಅಹೋರಾತ್ರಿ ಧರಣಿ