Webdunia - Bharat's app for daily news and videos

Install App

ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಕ್ರೇಜಿವಾಲ್

Webdunia
ಭಾನುವಾರ, 28 ಆಗಸ್ಟ್ 2022 (17:31 IST)
ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ವೆಚ್ಚ ಮಾಡದಿದ್ದರೆ ಕೇಂದ್ರ ಸರ್ಕಾರ ಆಹಾರದ ಪದಾರ್ಥಗಳ ಮೇಲೆ GST ವಿಧಿಸುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​​  ಹೇಳಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ ಎಂದು ಕರೆದ ನಂತರ ಕೇಜ್ರಿವಾಲ್ ಈ ರೀತಿಯ ಆರೋಪ ಮಾಡಿದ್ದಾರೆ.  ಬಿಜೆಪಿ GST ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಸಂಗ್ರಹಿಸಿದ ಹಣವನ್ನು ಶಾಸಕರ ಖರೀದಿಗೆ ಬಳಸಿಕೊಳ್ಳುತ್ತಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಇತರ ಪಕ್ಷಗಳ ಶಾಸಕರ ಖರೀದಿಗೆ ಬಿಜೆಪಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ ಎಂದು ಅವರು ಟೀಕಿಸಿದರು.  ಮೊಸರು, ಬೆಣ್ಣೆ, ತುಪ್ಪ, ಗೋಧಿ, ಅಕ್ಕಿ ಮತ್ತಿತರ ವಸ್ತುಗಳ ಮೇಲೆ GST ವಿಧಿಸಿ, ವರ್ಷಕ್ಕೆ 7.500 ಕೋಟಿ ರೂ. ಆದಾಯವನ್ನು ಕೇಂದ್ರ ಸರ್ಕಾರ ಸಂಗ್ರಹಿಸಲಿದೆ. ಸರ್ಕಾರಗಳ ಪತನಕ್ಕೆ ಇಲ್ಲಿಯವರೆಗೂ ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಅವರು ಸರ್ಕಾರಗಳನ್ನು ಉರುಳಿಸದಿದ್ದರೆ ಗೋಧಿ, ಅಕ್ಕಿ, ಮಜ್ಜಿಗೆ ಇತ್ಯಾದಿಗಳ ಮೇಲೆ GST ಹೇರಬೇಕಾಗುತ್ತಿರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗಿರಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments