ಬೆಂಗಳೂರು: ಉಚಿತವಾಗಿ ಏನೇ ಕೊಡುತ್ತೇವೆಂದರೂ ಜನ ಮುಗಿಬೀಳುವುದು ಸಹಜ. ಅದರಲ್ಲೂ ಲಾಕ್ ಡೌನ್ ನಂತಹ ಬರಗೆಟ್ಟ ಸಂದರ್ಭದಲ್ಲಿ ಕೇಳಬೇಕೇ?
ಲಾಕ್ ಡೌನ್ ನಿಂದಾಗಿ ಬಡವರು ತೊಂದರೆ ಅನುಭವಿಸುವುದು ಬೇಡವೆಂದು ಸರ್ಕಾರ ಉಚಿತವಾಗಿ ಹಾಲು, ದಿನಸಿ ಕೊಡಲು ಮುಂದಾಗಿದೆ. ಆದರೆ ಇದರಿಂದ ಜನರು ಲಾಕ್ ಡೌನ್ ನಿಯಮಗಳನ್ನೂ ಮರೆತು, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಗುಂಪು ಸೇರುತ್ತಿದ್ದಾರೆ.
ಕೊರೋನಾ ಹರಡದಂತೆ ಲಾಕ್ ಡೌನ್ ಮಾಡಿದ ಮೇಲೆ ಜನರಿಗೆ ಎಂದಿನಂತೆ ಆಹಾರ ವಸ್ತುಗಳಿಗೆ ಕೊರತೆಯಾಗದಂತೆ ಸರ್ಕಾರ ನೋಡಿಕೊಂಡಿದೆ. ಹಾಗಿದ್ದರೂ ಉಚಿತವಾಗಿ ಸಿಗುತ್ತದೆಂದಾಗ ಜನ ಜೀವ ಭಯವನ್ನೂ ಮರೆತು ಮುಗಿಬೀಳುತ್ತಿರುವುದು ವಿಪರ್ಯಾಸದ ಸಂಗತಿ. ಹಲವೆಡೆ ಪೊಲೀಸರು ಲಾಠಿ ರುಚಿ ತೋರಿಸಬೇಕಾದ ಪರಿಸ್ಥಿತಿ ಬಂದಿದೆ.