ದೇಶದ ಎರಡನೇಯ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕವನ್ನು ಮಂಗಳೂರಿನಲ್ಲಿ ಸಂಸದ ನಳೀನ್ ಕುಮಾರ್ ಕುಟೀರ್ ಉದ್ಘಾಟಿಸಿದರು.
ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವ ತೈಲವನ್ನು ಯುದ್ಧ ಹಾಗೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ತೈಲ ಸಂಗ್ರಹಕಾರ ಘಟಕವನ್ನು ಸ್ಥಾಪಿಸಲಾಗಿದೆ. ಈ ತೈಲ ಸಂಗ್ರಹಕಾರ ಘಟಕದಲ್ಲಿ ಸುಮಾರು 0.25 ಮಿಲಿಯನ್ ಮೆಟ್ರಿಕ್ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.
ದೇಶದ ಮೂರನೇಯ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಹಾಗೂ ಉಡುಪಿಯ ಪಾದೂರಿನಲ್ಲಿ ಉದ್ಘಾಟಿಸಲಾಯಿತು. ಈ ಮೂರು ತೈಲ ಸಂಗ್ರಹಕಾರ ಘಟಕದಲ್ಲಿ ಸಂಗ್ರಹಿಸಿದ ತೈಲವನ್ನು ಸುಮಾರು 15 ದಿನಗಳ ಬಳಕೆ ಮಾಡಿಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ