Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶದ 2ನೇ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕ ಉದ್ಘಾಟನೆ

ದೇಶದ 2ನೇ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕ ಉದ್ಘಾಟನೆ
ಮಂಗಳೂರು , ಬುಧವಾರ, 12 ಅಕ್ಟೋಬರ್ 2016 (14:11 IST)
ದೇಶದ ಎರಡನೇಯ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕವನ್ನು ಮಂಗಳೂರಿನಲ್ಲಿ ಸಂಸದ ನಳೀನ್ ಕುಮಾರ್ ಕುಟೀರ್ ಉದ್ಘಾಟಿಸಿದರು.
ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವ ತೈಲವನ್ನು ಯುದ್ಧ ಹಾಗೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ತೈಲ ಸಂಗ್ರಹಕಾರ ಘಟಕವನ್ನು ಸ್ಥಾಪಿಸಲಾಗಿದೆ. ಈ ತೈಲ ಸಂಗ್ರಹಕಾರ ಘಟಕದಲ್ಲಿ ಸುಮಾರು 0.25 ಮಿಲಿಯನ್ ಮೆಟ್ರಿಕ್ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.
 
ದೇಶದ ಮೂರನೇಯ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಹಾಗೂ ಉಡುಪಿಯ ಪಾದೂರಿನಲ್ಲಿ ಉದ್ಘಾಟಿಸಲಾಯಿತು. ಈ ಮೂರು ತೈಲ ಸಂಗ್ರಹಕಾರ ಘಟಕದಲ್ಲಿ ಸಂಗ್ರಹಿಸಿದ ತೈಲವನ್ನು ಸುಮಾರು 15 ದಿನಗಳ ಬಳಕೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರನ್ನು ರಕ್ಷಿಸುವವರನ್ನು ಸುಮ್ಮನೆ ಬಿಡೋಲ್ಲ: ಪ್ರಧಾನಿ ಮೋದಿ ಗುಡುಗು