ಹೈದರಾಬಾದ್ ಮೂಲದ ವ್ಯಕ್ತಿಗೆ ಕೋರೋನಾ ಸೋಂಕು ದೃಢಪಟ್ಟ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಹೀಗಂತ ಪಶು ಸಂಗೋಪಣೆ, ವಕ್ಫ ಮತ್ತು ಹಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಜಿಲ್ಲೆಯ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಹೈದರಾಬಾದ್ ರಾಜ್ಯವು ಬೀದರ್ ಜಿಲ್ಲೆಗೆ ಹತ್ತಿರವಾಗಿರುವುದರಿಂದ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಿತ್ಯ ವ್ಯಾಪಾರ ವಹಿವಾಟಿಗಾಗಿ ಪಕ್ಕದ ಜಿಲ್ಲೆಗೆ ತೆರಳುವುದು ಅನಿವಾರ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಬಗ್ಗೆ ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ ಮಾಡುವಾಗ ತಪ್ಪದೇ ಮಾಸ್ಕಗಳನ್ನು ಬಳಸಬೇಕು. ಬೀದರ್ ಜಿಲ್ಲೆಯ ಜನರು ಆರೋಗ್ಯದ ದೃಷ್ಟಿಯಿಂದ ಜಾಗರೂಕರಾಗಿರಬೇಕು. ಹಾಗೂ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕು.
ಆರೋಗ್ಯದಲ್ಲಿ ಯಾವುದೇ ತರಹದ ಏರು-ಪೇರು ಕಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಮರೆಯಬಾರದು. ವೈದ್ಯರು ಹೇಳುವಂತೆ ಕೈಗಳನ್ನು ತಪ್ಪದೆ ಸೋಪು ಹಾಗೂ ಸ್ಯಾನಿಟೈಸರ್ ಜಲ್ ನಿಂದ ತೊಳೆದುಕೊಳ್ಳಬೇಕು. ಕೆಮ್ಮು -ನೆಗಡಿ ಇದ್ದ ಸಂದರ್ಭದಲ್ಲಿ ದಿಸ್ಫೋಜೇಬಲ್ ಟಿಶ್ಯೂ ಬಳಸಿ ಮತ್ತು ಕ್ರಮಬದ್ಧವಾಗಿ ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.