ಮದುವೆಯಾಗುವುದಾಗಿ ವಿಧವೆಯೊಬ್ಬಳಿಗೆ ನಂಬಿಸಿ ಕೈಕೊಟ್ಟಿದ್ದ ಆರೋಪಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಮ್ಯಾಟ್ರಿಮೋನಿಯಲ್ಲಿ ವಿಧವೆಯನ್ನು ಪರಿಚಯ ಮಾಡಿಕೊಂಡ ಬೆಂಗಳೂರಿನ ಯುವಕನೊಬ್ಬ ವಿಧವೆಯಿಂದ 30 ಗ್ರಾಂ ಚಿನ್ನಾಭರಣ, ಲಕ್ಷಾಂತರ ಹಣ ಪಡೆದುಕೊಂಡು ವಂಚನೆ ಮಾಡಿದ್ದನು.
ವಿಧವೆ ನೀಡಿದ ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಹುಬ್ಬಳ್ಳಿಯ ಅಶೋಕ ನಗರ ಪೊಲೀಸರು ಬಂಧನ ಮಾಡಿದ್ದಾರೆ.
ಆದರೆ ಆರೋಪಿಗೆ ಕೊರೊನಾ ದೃಢಪಟ್ಟಿದ್ದು, ಪೊಲೀಸರು ಕ್ವಾರಂಟೈನ್ ಆಗಿದ್ದಾರೆ.