ಬಳ್ಳಾರಿ : ಗಣಿ ನಾಡು ಬಳ್ಳಾರಿಗೆ ಬಿಗ್ ಶಾಕ್ ಎದುರಾಗಿದ್ದು, ಜಿಂದಾಲ್ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ.
ಇಂದು ಜಿಂದಾಲ್ ಕಾರ್ಮಿಕರಲ್ಲಿ ಬರೋಬರಿ 40 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಬಳ್ಳಾರಿ ಜಿಂದಾಲ್ ಜ್ಯುಬೆಲಿಯೆಂಟ್ ಆಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ನಿನ್ನೆ 32 ಕೇಸ್ ದಾಖಲಾಗಿದ್ದು, ಇಂದು 40 ಮಂದಿಗೆ ವೈರಸ್ ಇರುವುದು ದೃಢಪಟ್ಟಿದೆ. ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ 70ಕ್ಕೇರಿಕೆಯಾಗಿದೆ ಎನ್ನಲಾಗಿದೆ.