ಬೆಂಗಳೂರು : ಶಾಲೆ ಆರಂಭಕ್ಕೂ ಮುನ್ನವೇ ಕೊರೊನಾ ಶಾಕ್ ಎದುರಾಗಿದೆ. ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾ.ಮಾಶಾಳ ಗ್ರಾಮದ ವಠಾರ ಶಾಲೆಯ ಶಿಕ್ಷಕನಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.
ಶಿಕ್ಷಕನಿಂದ 4 ಮಕ್ಕಳಿಗೆ ಸೋಂಕು ಹರಡಿದೆ ಎನ್ನಲಾಗಿದೆ. ಸೋಂಕು ಹಿನ್ನಲೆ 5 ವಟಾರ ಶಾಲೆ ಸೀಲ್ ಡೌನ್ ಮಾಡಲಾಗಿದೆ. ವಿದ್ಯಾಗಮ ಅಡಿಯಲ್ಲಿ ಶಾಲೆ ನಡೆಸಲಾಗುತ್ತಿತ್ತು. 20 ದಿನದ ಹಿಂದೆ ಮುಖ್ಯ ಶಿಕ್ಷಕನಿಗೆ ಸೋಂಕು ದೃಢಪಟ್ಟಿತ್ತು. ಅದೇ ಶಾಲೆಯ 20 ಶಿಕ್ಷಕರಿಗೆ ನೆಗೆಟಿವ್ ಬಂದಿತ್ತು.
ಆದರೆ ಇದೀಗ ಶಿಕ್ಷಕನಿಗೆ ಹಾಗೂ 207 ವಿದ್ಯಾರ್ಥಿಗಳ ಪೈಕಿ 4 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ವರದಿ ಬಾಕಿ ಇದೆ. ವಠಾರ ಶಾಲೆಯಲ್ಲಿ ಆತಂಕ ಮನೆಮಾಡಿದೆ ಎನ್ನಲಾಗಿದೆ.