Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಎಫೆಕ್ಟ್ : ರಾಸಾಯನಿಕ ಮುಕ್ತ ಸುರಂಗಕ್ಕೆ ಸಚಿವರ ಭೇಟಿ

ಕೊರೊನಾ ಎಫೆಕ್ಟ್ : ರಾಸಾಯನಿಕ ಮುಕ್ತ ಸುರಂಗಕ್ಕೆ ಸಚಿವರ ಭೇಟಿ
ಗೌರಿಬಿದನೂರು , ಸೋಮವಾರ, 6 ಏಪ್ರಿಲ್ 2020 (19:26 IST)
ರಾಸಾಯನಿಕ ಮುಕ್ತ ಸುರಂಗವನ್ನು ಸಚಿವರೊಬ್ಬರು ವೀಕ್ಷಿಸಿದರು.

ಗೌರಿಬಿದನೂರಿನಲ್ಲಿ ಅಳವಡಿಸಿರುವ ರಾಸಾಯನಿಕ ಮುಕ್ತ ಡಿಸ್ ಇನ್ಫೆಕ್ಟ್  ಸುರಂಗ ವ್ಯವಸ್ಥೆಯನ್ನು ಸಚಿವ ಸುರೇಶ್ ಕುಮಾರ್  ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು  ಎಳೆದುಕೊಂಡು ಮುಕ್ತ ಮಾಡುವ ರಾಸಾಯನಿಕ ರಹಿತ ಸಿಂಪಡಣಾ ಯಂತ್ರಗಳನ್ನು ಅಳವಡಿಸಲಾಗಿದೆ.  ಇಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಕಿತ್ತಳೆ, ನಿಂಬೆ, ಗಜನಿಂಬೆ, ಏಳಿಕಾಯಿ ಮತ್ತಿತರ ಪ್ರಕೃತಿದತ್ತವಾದ ಹಣ್ಣು ಕಾಯಿಗಳ ಹೊಟ್ಟು, ತಿರಳನ್ನು ಬಳಸಿ ಸಾವಯವ ದ್ರವವನ್ನು ತಯಾರಿಸಿ ಅದನ್ನು  ಫಾಗರ್ ಯಂತ್ರಗಳ ಮೂಲಕ‌ ವ್ಯಕ್ತಿಗೆ ಸಿಂಪಡಣೆ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಕುರಿತು ಮತ್ತಷ್ಟು ಹೆಚ್ಚಿನ‌ ಮಾಹಿತಿ ಪಡೆಯಲಾಗುತ್ತಿದೆ.

ಮೇಲ್ನೋಟಕ್ಕೆ ಈ ಪ್ರಯೋಗ ಸಕಾರಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಕಂಡು ಬಂದಿದೆ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಈ ಡಿಸ್ ಇನ್ ಫೆಕ್ಷನ್ ವ್ಯವಸ್ಥೆ ಲಭ್ಯವಿದೆ ಎಂದು ತಿಳಿದುಬಂದಿರುವುದರಿಂದ ಹಾಗೂ ಆರೋಗ್ಯಕ್ಕೆ ಪೂರಕವಾದ ರಾಸಾಯನಿಕ ಮುಕ್ತ ಸಿಂಪಡಣೆ ವೈರಸ್, ಬ್ಯಾಕ್ತೀರಿಯಾಗಳ ವಿರುದ್ಧ ಹೋರಾಡುವುದರಿಂದ ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ಈ ಕೆಲಸಕ್ಕೆ ನಿರ್ಬಂಧವಿಲ್ಲ ಎಂದ ಸಚಿವ