ಮಳೆಯ ಅಬ್ಬರಕ್ಕೆ ರಾಜಧಾನಿಯಲ್ಲಿ ಕಳಪೆ ಕಾಮಗರಿಗಳು ಅನಾವರಣಗೊಂಡಿದೆ.ಗೋವಿಂದರಾಜನಗರದ ನಡು ರಸ್ತೆಯಲ್ಲಿಯೇ ರಸ್ತೆ ಕುಸಿದಿದೆ.ಗೋವಿಂದರಾಜನಗರದ 3ನೇ ಮುಖ್ಯ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚಿನ ಗುಂಡಿ ಬಿದ್ದಿದೆಸುಮಾರು 5 ಅಡಿ ಉದ್ದ ಹಾಗೂ 3 ಅಡಿ ಅಗಲ ರಸ್ತೆ ಕುಸಿದಿದೆ.ಅದೇ ರಸ್ತೆಯ 100 ಮೀಟರ್ ಅಂತರದಲ್ಲಿ ಮತ್ತೊಂದು ಕಡೆ ಗುಂಡಿ ಕುಸಿದಿದೆ.ಗುಂಡಿ ಬಿದ್ದು 15 ದಿನವಾದ್ರೂ ಇನ್ನೂ ಕೂಡ ಸರಿಪಡಿಸಿಲ್ಲ.ದಿನದದಿಂದ ದಿನಕ್ಕೆ ಗುಂಡಿ ಗಾತ್ರ ದೊಡ್ಡ ಆಗ್ತಿದೆ.ಯಾವುದೇ ಮುಂಜಾಗ್ರತಾ ಕ್ರಮ ಕೂಡ ಕೈಗೊಂಡಿಲ್ಲ.ರಾತ್ರಿವೇಳೆ ಗುಂಡಿ ಕಾಣದೆ ವಾಹನ ಸವಾರ ಪರದಾಟ ನಡೆಸಿದ್ದಾರೆ.ಚುನಾವಣೆಗೂ ಮುನ್ನ ಈ ರಸ್ತೆಗೆ ಡಾಂಬರ್ ಹಾಕಲಾಗಿತ್ತು.ಈ ರಸ್ತೆಯಲ್ಲಿ ನಿತ್ಯ ನೂರಾರು ಜನರ ಓಡಾಡ್ತಾರೆ .ಇದೇ ಗುಂಡಿಯಿಂದ ಈಗಾಗಲೇ ಸಾಕಷ್ಟು ಜನರು ಬಿದ್ದಿದ್ದಾರೆ.ಏನಾದರೂ ಅನಾಹುತ ಆದರೆ ಮಾತ್ರ ಅಧಿಕಾರಿಗಳು ಬರೋದು ಎಂದು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.