Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ಚೆಲ್ಲಾಟ ಆಡಬಾರದು-ಮಾಜಿ ಸಚಿವ ಸಿ.ಟಿ ರವಿ

c t ravi

geetha

bangalore , ಶನಿವಾರ, 20 ಜನವರಿ 2024 (14:50 IST)
ಬೆಂಗಳೂರು-ಗುಜರಾತ್‌ನ ಕಾಂಗ್ರೆಸ್ ಶಾಸಕ‌ ಚಾವಡ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದಾರೆ.ಅಯೋಧ್ಯೆ ವಿಚಾರವಾಗಿ ಕಾಂಗ್ರೆಸ್ ತೆಗೆದುಕೊಂಡ ನಿರ್ಣಯದ ವಿರುದ್ಧ ನಾನು ರಾಜೀನಾಮೆ ಕೊಡ್ತಿರೋದಾಗಿ ಹೇಳಿದ್ದಾರೆ.ಕಾಂಗ್ರೆಸ್‌ನ ಬಾಬರ್ ಕೃತ್ಯ ವಿರೋಧೀಸಿ ರಾಜೀನಾಮೆ ಕೊಡಲು ಇದು ಸಕಲಾ.ವಿಭೀಷಣ ರಾವಣನ‌ ಸಹೋದರ ಆದ್ರೂ ಸೀತೆ ವಿರುದ್ಧದ ವಿಚಾರವಾಗಿ ಹೊರಗೆ ಬಂದ.ರವಣನ ವಿರುದ್ಧವೇ ಹೋರಾಟ ಮಾಡಿದ.ಅಯೋಧ್ಯೆ ವಿಚಾರದಲ್ಲಿ ಕಾಂಗ್ರೆಸ್ ಸಣ್ಣ ರಾಜಕಾರಣ ನಡೆಸುತ್ತಿದ್ದು.ಒಬ್ಬ ಸಚಿವ ಗೊಂಬೆಗೆ ಹೋಲಿಸ್ತಾನೆ, ಮತ್ತೊಬ್ಬ ಸಚಿವ ನಾನ್ಯಾಕೆ ಹಣ ಕೊಡಬೇಕು ಅಂತಾನೆ.ಆಮಂತ್ರಣ ಬಂದ ಬಳಿಕವೂ ಕಾಂಗ್ರೆಸ್‌ನ ತೆಗೆದುಕೊಂಡ ನಿಲುವು ಸರಿಯಿಲ್ಲ ಅದನ್ನ ಖಂಡಿಸಿ ರಾಜೀನಾಮೆ ನೀಡಿ‌ ಹೊರಗೆ ಬನ್ನಿ ಎಂದು ಕಾಂಗ್ರೆಸ್ ಹಿಂದೂತ್ವದ ನಾಯಕರಿಗೆ ಸಿ.ಟಿ ರವಿ ಕರೆ ಕೊಟ್ಟಿದ್ದಾರೆ.
 
ಇನ್ನೂ ಬಿ.ಕೆ ಹರಿಪ್ರಸಾದ್‌ ಆರೋಪ ವಿಚಾರವಾಗಿ ಗೋದ್ರಾ ರೀತಿ ಮತ್ತೊಂದು ಹತ್ಯೆ ಆಗಬಹುದು ಅಂತ‌ ಹೇಳಿಕೆ‌ ಕೊಡ್ತಾರೆ ಅವರ ಬಳಿ ಮಾಹಿತಿ ಇದ್ರೆ ಶೇರ್ ಮಾಡಿ,ಇಲ್ಲದಿದ್ರೆ ಸುಮ್ಮನೆ ಹೇಳಿಕೆ ಕೊಟ್ಟೆ ಅಂತ‌ಲಾದ್ರೂ ಹೇಳಬೇಕು.ಜವಾಬ್ದಾರಿಯುತ ನಾಯಕರಾಗಿ ಹೇಳಬೇಕು.ನನ್ನ ಬಳಿ ಮಾಹಿತಿ ಇತ್ತು ಅಂತ ಮಾಹಿತಿ ನೀಡಿ ಅಹಿತ ಘಟನೆ ನಡೆದ್ರೆ ಕಷ್ಟ.ಮೊದಲೇ ಕೇಳಿದ್ರೆ ಹೇಳ್ತಿದ್ದೆ ಅನ್ನಬಹುದು.ಹಾಗಾಗಿ ಅದನ್ನ ತಡೆಯಲು ಹರಿಪ್ರಸಾದ್‌ ಮಾಹಿತಿ ನೀಡಬೇಕು ಎಂದು ಸಿಟಿ ರವಿ ಹೇಳಿದ್ದಾರೆ.
 
ಇನ್ನೂ ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡಿದ ಸಿಟಿ ರವಿ ಆಗ ಸಚಿವರೇ ಕಾರಣ ಅಂತ ಆರೋಪ ಮಾಡಿದ್ರು.ಅನೇಕ ಆರೋಪಿಗಳನ್ನು ಬಂಧಿಸಿದ್ರು.ಪ್ರತಿಯೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದೆ.ಇದು ಗಂಭೀರ ವಿಚಾರ ಇದರ ಕಿಂಗ್ ಪಿನ್ ಯಾರು ಅಂತ ಹೊರಗೆ ಬರಬೇಕು.ಕಿಂಗ್ ಪಿನ್ ಕ್ಯಾಬಿನೆಟ್ ಒಳಗಿದ್ದಾರಾ, ಹೊರಗಿದ್ದಾರಾ.?ಅವರ ರಕ್ಷಣೆ ಇವರೇ ಮಾಡ್ತಿದ್ದಾರಾ.?ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಶ್ನೆ.ಇವರೆಲ್ಲರ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು ಎಂದು ಸರ್ಕಾರಕ್ಕೆ ಸಿಟಿ ರವಿ ಆಗ್ರಹಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಫೆಡೆಕ್ಸ್ ಕೊರಿಯರ್ ಹೆಸರಿನಲ್ಲಿ ವ್ಯಕ್ತಿಗೆ ವಂಚನೆ