Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು , ಗುರುವಾರ, 1 ಮಾರ್ಚ್ 2018 (17:14 IST)
ಲೋಕಪಾಲ ಆಯ್ಕೆ ಸಮಿತಿ ಸಭೆಗೆ ಹಾಜರಾಗುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನೀಡಲಾಗಿದ್ದ ಆಹ್ವಾನವನ್ನು ಅವರು ತಿರಸ್ಕರಿಸಿದ್ದಾರೆ.
ಈ ಸಭೆಗೆ ವಿಶೇಷ ಆಹ್ವಾನಿತರಾಗಿ ಬರುವಂತೆ ಪ್ರಧಾನಿ ಮೋದಿ ಆಹ್ವಾನವಿತ್ತಿದ್ದರು. ಆದರೆ ಖರ್ಗೆ ಸಭೆಗೆ ಹಾಜರಾಗದೇ ಇರಲು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಮೋದಿ ಜತೆಗೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಆಗಮಿಸಲಿದ್ದಾರೆ.
 
ಆದರೆ ಸಭೆಯಲ್ಲಿ ತಮಗೆ ವಿಶೇಷ ಆಹ್ವಾನಿತನ ಸ್ಥಾನ ನೀಡಲಾಗಿದೆಯಷ್ಟೆ. ಹೀಗಾಗಿ ಡಮ್ಮಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅದನ್ನು ವಿರೋಧಿಸುವ ಅಧಿಕಾರವಿರುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸದೇ ಇರಲು ಖರ್ಗೆ ತೀರ್ಮಾನಿಸಿದ್ದಾರೆ.
 
 
ಬಿಜೆಪಿ ಪಾದಯಾತ್ರೆಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ
 
ಬೆಂಗಳೂರು ರಕ್ಷಿಸಿ ಎಂದು ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ಟ್ಟಿದ್ದಾರೆ.
 
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೆಂಗಳೂರನ್ನು ಮುಳುಗಿಸಿದವರೇ ಬಿಜೆಪಿಯವರು. ಬೆಂಗಳೂರನ್ನು ಬಿಜೆಪಿ ಗೂಂಡಾಗಳಿಂದ ರಕ್ಷಿಸಬೇಕಷ್ಟೇ. ಯಾವ ಪಾದಯಾತ್ರೆ ಮಾಡಿದ್ರೆ ಏನು ಪ್ರಯೋಜನ? ಎಂದು ಟಾಂಗ್ ಕೊಟ್ಟಿದ್ದಾರೆ.
 
ಅತ್ತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೂಡಾ ಇದೇ ವಿಚಾರಕ್ಕೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಗೂಂಡಾಗಿರಿ ನಡೆಸುತ್ತಿರುವವರೇ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ದಬ್ಬಾಳಿಕೆ!
 
ಸಿಎಂ ಬೆಂಗಾವಲು ಪಡೆಯವರು ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ ಕುರಿತು ವರದಿಯಾಗಿದೆ. ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. 
 
ಸಿಎಂ ಬೆಂಗಾವಲು ಪಡೆಯವರು ಕ್ಯಾಮೆರಾ ಮೆನ್ ಗಳಿಗೆ ವಿಡಿಯೋ ಮಾಡದಂತೆ ತಡೆಯನ್ನುಂಟು ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಸಿಎಂ ಬೆಂಗಾವಲು ಪಡೆಯವರು ಅಡ್ಡಿಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದ ತಂದೆ!