ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಬೇಕಾದರೆ ಕೆಲವು ಕಟ್ಟು ನಿಟ್ಟಿನ ಸೂಚನೆಯನ್ನು ಕಾಂಗ್ರೆಸ್ ಹೈಕಮಾಂಡ್ ಆಕಾಂಕ್ಷಿಗಳಿಗೆ ರವಾನಿಸಿದೆ.
ಚುನಾವಣೆಗೆ ನಾನೇ ಸ್ಪರ್ಧಿ ಎಂದು ಪಕ್ಷ ಘೋಷಿಸುವ ಮೊದಲೇ ಬಹಿರಂಗವಾಗಿ ಹೇಳುವ ಹಾಗಿಲ್ಲ ಎಂದು ಈಗಾಗಲೇ ಹೈಕಮಾಂಡ್ ಆದೇಶಿಸಿತ್ತು. ಅದೇ ರೀತಿ ಇದೀಗ ಮತ್ತಷ್ಟು ಕಟ್ಟಪ್ಪಣೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರದ ಜನರೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿರಬೇಕು. ಕ್ಷೇತ್ರದ ತುಂಬಾ ಓಡಾಡುತ್ತಿರಬೇಕು. ನಂತರ ಕೆಪಿಸಿಸಿ ಮತ್ತು ಸರ್ಕಾರದ ವತಿಯಿಂದ ಸರ್ವೇ ನಡೆಸಲಾಗುವುದು. ಸರ್ವೇಯಲ್ಲಿ ಹೆಚ್ಚು ಜನಪ್ರಿಯತೆ ಇರುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಎಂದು ರಾಹುಲ್ ಗಾಂಧಿ ಖಡಕ್ ಆಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ