Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಮಹಾರಾಜರ ಕಾಲದಿಂದಲೂ ಕಪ್ಪ ನೀಡುವ ಪದ್ದತಿ ಬಂದಿದೆ: ಎಚ್.ವಿಶ್ವನಾಥ

ರಾಜಮಹಾರಾಜರ ಕಾಲದಿಂದಲೂ ಕಪ್ಪ ನೀಡುವ ಪದ್ದತಿ ಬಂದಿದೆ: ಎಚ್.ವಿಶ್ವನಾಥ
ಮೈಸೂರು , ಬುಧವಾರ, 22 ಫೆಬ್ರವರಿ 2017 (14:22 IST)
ರಾಜಮಹಾರಾಜರ ಕಾಲದಿಂದಲೂ ಕಪ್ಪ ನೀಡುವ ಪದ್ದತಿ ಬಂದಿದೆ.  ಕಪ್ಪು ನೀಡುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದೂ ಕೂಡಾ ಕಪ್ಪ ಕೊಡುವ ಸಂಸ್ಕ್ರತಿಯಿದೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ.
 
ಹಿಂದೆ ದೇವೇಗೌಡರು ಕೂಡಾ ಕಪ್ಪ ನೀಡಿದ್ದಾರೆ. ಆದರೆ, ಇದೀಗ ಅವರದ್ದು ಪ್ರಾದೇಶಿಕ ಪಕ್ಷವಾಗಿದ್ದರಿಂದ ಹಾಗಾಗಿ ಕಪ್ಪ ನೀಡುತ್ತಿಲ್ಲ. ಸಿಎಂ ವಿರುದ್ಧ ಯಡಿಯೂರಪ್ಪ ಕಪ್ಪ ವಿಚಾರ ಕುರಿತಂತೆ ಜೈಲಿಗೆ ಹಾಕಿಸ್ತಿನಿ ಅಂತಾರೆ. ಇವೆಲ್ಲಾ ಬಾಲಿಶ ಹೇಳಿಕೆಗಳು ಎಂದು ತಿರುಗೇಟು ನೀಡಿದ್ದಾರೆ.
 
ಯಡಿಯೂರಪ್ಪ ಕೂಡಾ ಬಿಜೆಪಿ ಪಕ್ಷದ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದವರೇ ಆಗಿದ್ದಾರೆ. ಅದನ್ನು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರೇ ಸಂಭಾಷಣೆಯಲ್ಲಿ ಸಾಬೀತುಪಡಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮನಬಂದಂತೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ದಾಖಲೆಗಳಿದ್ದರೆ ಆರೋಪ ಮಾಡಿ ಅದನ್ನು ಸಾಬೀತುಪಡಿಸಿ. ಆಧಾರವಿಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಶ್ವರ ಶ್ರೀಗಳಿಗೆ ಬ್ಲಾಕ್ ಮೇಲ್ ಪ್ರಕರಣ: ಪ್ರೇಮಲತಾ- ದಿವಾಕರ್ ದಂಪತಿಗೆ ಕ್ಲೀನ್ ಚಿಟ್