Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಮಾರಸ್ವಾಮಿ ಮುಡಾ ಅಕ್ರಮ ನಡೆಸಿದ್ದರು ಎಂದು ಯಡಿಯೂರಪ್ಪ ಹೇಳಿದ್ದರು: ಕಾಂಗ್ರೆಸ್ ಬಾಂಬ್

Congress

Krishnaveni K

ಬೆಂಗಳೂರು , ಭಾನುವಾರ, 14 ಜುಲೈ 2024 (11:07 IST)
ಬೆಂಗಳೂರು: ಬಿಜೆಪಿಯ ಮುಡಾ, ವಾಲ್ಮೀಕಿ ನಿಗಮ ಹೋರಾಟಕ್ಕೆ ಪ್ರತಿಯಾಗಿ ಈಗ ರಾಜ್ಯ ಕಾಂಗ್ರೆಸ್ ಘಟಕ ತಿರುಗೇಟು ನೀಡುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾದಲ್ಲಿ ಕುಮಾರಸ್ವಾಮಿಯವರಿಂದ ಅಕ್ರಮ ನಡೆದಿತ್ತು ಎಂದು ಅಂದಿನ ಸಿಎಂ ಯಡಿಯೂರಪ್ಪ ಅವರೇ ದಾಖಲೆ ಬಿಡುಗಡೆ ಮಾಡಿದ್ದರು ಎಂದಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಕಾಂಗ್ರೆಸ್ ಸುದೀರ್ಘ ವಿವರಣೆ ನೀಡಿದೆ.
 
ಯಡಿಯೂರಪ್ಪ ಅವರು 2011 ರ ಮಾರ್ಚ್ 17 ರಂದು ಮುಡಾ ಬಗ್ಗೆ ಗಂಭೀರವಾದ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಮೋಟಮ್ಮ ಅವರು ವಿಧಾನ ಪರಿಷತ್ತಿನ ನಾಯಕರಾಗಿರುತ್ತಾರೆ. ಮುಡಾದಲ್ಲಿ ಒಂದೇ ಕುಟುಂಬದವರು 48 ಸೈಟುಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 300/200 ಚದರ ಅಡಿ ಸೈಟ್‌ ನಂಬರ್ 17 (ಬಿ), ಸವಿತಾ ಎನ್ನುವವರಿಗೆ ಸೈಟ್ 17 (ಬಿ 1) 75/201 ಚದರ ಅಡಿ ಅನ್ನು ದೇವೇಗೌಡರ ಕಾಲದಲ್ಲಿ ನೀಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ಸವಿತಾ ಕೋ ಬೀರೇಗೌಡ ಅವರಿಗೆ 130/ 100, 110/ 80 ಅಡಿ ನಿವೇಶನಗಳನ್ನು ಸೇರಿದಂತೆ ದೇವೇಗೌಡರು ಸೊಸೆಯಂದಿರಿಗೆ 48 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಇದನ್ನು ಹಗಲು ದರೋಡೆ ಎಂದು ಯಡಿಯೂರಪ್ಪ ಅವರು ಸದನದಲ್ಲಿ ಚರ್ಚೆ ಆಗ್ರಹಿಸಿದ್ದರು. 60 ಸಾವಿರ ಅಡಿ ನಿವೇಶನ ಅಂದರೆ 1.5 ಎಕರೆ ಜಮೀನನ್ನು ಕುಮಾರಸ್ವಾಮಿ ಅವರಿಗೆ ಮಂಜೂರು ಮಾಡಲಾಗಿದೆ. ಯಡಿಯೂರಪ್ಪ ಅವರು ಈ ಅಕ್ರಮದ ಬಗ್ಗೆ ದಾಖಲೆ ಕೊಡುತ್ತಿದ್ದೇನೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸುತ್ತಾರೆ.
 
ಬಿ.ಎಸ್.ಯಡಿಯೂರಪ್ಪ ಅವರು ವಿಧಾನಪರಿಷತ್ ಅಲ್ಲಿ ಮುಡಾ ಬಗ್ಗೆ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಸಲಾಗುತ್ತದೆ‌. ಈ ದಾಖಲೆಗಳ ಮೇಲೆ ತನಿಖೆಯಾಗಬೇಕು ಎಂದು ತಿಳಿಸುತ್ತಾರೆ. ವಿಧಾನಪರಿಷತ್ತಿನ ನಡಾವಳಿಗಳ ಪ್ರಕಾರ ಯಾವುದೇ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದರೆ ತನಿಖೆ ನಡೆಸಬೇಕು ಎನ್ನುವ ನಿಯಮ ಮಾಡಿಕೊಳ್ಳಲಾಗಿದೆ‌‌. ಆದರೆ ಬಿಜೆಪಿಯವರು ಬಾಯಿಯೇ ಬಿಡುತ್ತಿಲ್ಲ.
 
ಬಿಜೆಪಿಯವರೇ ನೀವು ಏಕೆ ತಟಸ್ಥವಾಗಿ ಇದ್ದೀರಾ? 2011 ರಲ್ಲಿ ನೀವೆ ಕೊಟ್ಟಿರುವ ದಾಖಲೆಗಳ ಮೇಲೆ ಮಾತಾನಾಡಿ. ನಿಮ್ಮದೇ ಮುಖ್ಯಮಂತ್ರಿ, ಸಭಾಪತಿಗಳು ಇದ್ದರು ಏಕೆ ತನಿಖೆ ಮಾಡಲಿಲ್ಲ. ಸಣ್ಣ, ಸಣ್ಣ ವಿಚಾರಕ್ಕೂ ಶೋಭಕ್ಕ, ರವಿಕುಮಾರ್, ಸಿ.ಟಿ.ರವಿ ಅವರು ರಾಜ್ಯಪಾಲರ ಮನೆ ಬಾಗಿಲು ತಟ್ಟುತ್ತಾರೆ. ರಾಜ್ಯಪಾಲರ ಮನೆಯನ್ನು ಮಾವನ ಮನೆ ಮಾಡಿಕೊಂಡಿದ್ದಾರೆ. 
 
ಕಾಂಗ್ರೆಸ್ ಪಕ್ಷದಿಂದ 09.07.24 ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು. 48 ಸೈಟು ಹಂಚಿಕೆಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳು ದಾಖಲೆ ಸಲ್ಲಿಕೆ ಮಾಡಿದರೆ ತನಿಖೆ ನಡೆಸಲೇ ಬೇಕು ಎನ್ನುವ ನಿಯಮವಿದೆ. ಯಡಿಯೂರಪ್ಪ ಅವರು 2011 ರಲ್ಲಿ ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ. ಅದಕ್ಕೆ ನಾವು ಸಹ ತನಿಖೆ ನಡೆಯಬೇಕು ಎಂದು ಪತ್ರ ಬರೆದಿದ್ದೇವೆ.
 
ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ಬೊಮ್ಮಾಯಿ, ಶ್ರೀರಾಮುಲು ಮೇಲೂ ತನಿಖೆ ನಡೆಯಲಿ
 
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಶ್ರೀರಾಮುಲು ಅವರು ಮೂಗಿನ ನೇರದಲ್ಲೇ ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಿ ಅಕ್ರಮ ನಡೆದಿದ್ದು ಇವರ ಮೇಲೂ ಸಿಐಡಿ ತನಿಖೆ ನಡೆಸಬೇಕು.
 
ಬೋಗಸ್ ದಾಖಲೆಗಳನ್ನು ಸಲ್ಲಿಸಿ ಹಣ ಪಡೆದುಕೊಂಡಿರುವ ಅಂಶ ಕೆಲವು ನಿರ್ದೇಶಕರ ಗಮನಕ್ಕೆ ಬಂದಿದೆ. ಯಾವ, ಯಾವ ಸಂಸ್ಥೆಗಳಿಗೆ ಹಣ ಪಾವತಿ ಆಗಿರುವುದು ಬೋಗಸ್ ಬಿಲ್ ಗಳನ್ನು ನೀಡಿ ಅಕ್ರಮ ಎಸಗಿರುವುದು ಸೇರಿದಂತೆ ಅನೇಕ ಅಕ್ರಮಗಳನ್ನು ನಿರ್ದೇಶಕ ಮಂಡಳಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾಗೂ ಸಾರಿಗೆ ಸಚಿವರಾಗಿದ್ದ ಶ್ರೀರಾಮುಲು ಅವರ ಗಮನಕ್ಕೆ ತರಲಾಗಿತ್ತು. 
 
ದೇವರಾಜ ಅರಸು ಟ್ರಕ್ ಟರ್ಮಿನಲ್ ನಡೆದಿರುವ ಅಕ್ರಮಗಳನ್ನು ಸಿಐಡಿ ತನಿಖೆ ನಡೆಸುತ್ತಿದ್ದು ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಶ್ರೀರಾಮುಲು ಅವರನ್ನು ಆರೋಪಿಗಳನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಸಲ್ಲಿಸುತ್ತೇನೆ.
 
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ಅನುಮಾನಿತರು ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಎಂಡಿ ಅವರ ಹೆಸರನ್ನು ಉಲ್ಲೇಖಿಸುತ್ತಾರೆ ಹೊರತು ಡಿ ಎಸ್ ವೀರಯ್ಯ ಅವರ ಹೆಸರು ಸಹ ಇಲ್ಲ. ಪತ್ರ ವ್ಯವಹಾರವಾಗಿದೆ ಎಂದರೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ಬರದೆ ಇವುಗಳು ನಡೆದಿರುವುದಿಲ್ಲ. ಆದ ಕಾರಣಕ್ಕೆ ಇವರನ್ನೂ ಸಹ ಆರೊಪಿಗಳನ್ನಾಗಿ ಮಾಡಬೇಕು.
 
50 ಕೋಟಿ ದುರುಪಯೋಗವಾಗಿದೆ ಎಂದು ಎಂಡಿ ಅವರು ಲಿಖಿತವಾಗಿ ದೂರು ನೀಡಿದ ನಂತರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಗಮನಕ್ಕೆ ಬಂದರು ಏಕೆ ಸುಮ್ನಿದ್ದರು. ಗಮನಕ್ಕೆ ಬರದೇ ಇದ್ದಿದ್ದರೇ ಬೇರೆ ವಿಚಾರವಾಗಗುತ್ತಿತ್ತು.
 
 
ಹಗರಣದ ಕುರಿತು ಮಾತನಾಡಬೇಕಾಗುತ್ತದೆ ಎಂದು ಸಾಮಾನ್ಯ ಸಭೆಯನ್ನು ಮುಂದಕ್ಕೆ ಹಾಕಿ ಎಂದು ನಿಗಮದ ಮಾಜಿ  ಅಧ್ಯಕ್ಷರಾದ ಡಿಎಸ್ ವೀರಯ್ಯ ಅವರು ಸಭೆಯನ್ನು ಮುಂದಕ್ಕೆ ಹಾಕುತ್ತಲೇ ಬಂದಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಕ್ಷಾಮದಿಂದಾಗಿ ಉಚಿತ ವಿದ್ಯುತ್ ಯೋಜನೆಗೇ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರ