Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಫಿ ನಾಡು ತತ್ತರ; ಮಳೆ ನಿಲ್ಲಿಸುವಂತೆ ಶ್ರೀಗಳಿಗೆ ಅರಿಕೆ ಮಾಡಿಕೊಂಡ ರೈತರು

ಕಾಫಿ ನಾಡು ತತ್ತರ; ಮಳೆ ನಿಲ್ಲಿಸುವಂತೆ ಶ್ರೀಗಳಿಗೆ ಅರಿಕೆ ಮಾಡಿಕೊಂಡ ರೈತರು
ಚಿಕ್ಕಮಗಳೂರು , ಭಾನುವಾರ, 12 ಆಗಸ್ಟ್ 2018 (16:33 IST)
ಕಾಫಿನಾಡು, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಮೂರು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರಿನ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕುದುರೆಮುಖ, ಕಳಸ, ಬಾಳೆಹೊನ್ನೂರು ಹಾಗೂ ತರೀಕೆರೆಯಲ್ಲಿ ರಾತ್ರಿಯಿಂದ ಧಾರಾಕಾರ ಮಳೆಯಾಗ್ತಿದೆ. ಮಲೆನಾಡಲ್ಲಿ ರಾತ್ರಿ ವೇಳೆಯಲ್ಲೇ ಹೆಚ್ಚು ಮಳೆಯಾಗ್ತಿದ್ದು, ಹಗಲಲ್ಲಿ ಬಿಟ್ಟು-ಬಿಟ್ಟು ಮಳೆ ಸುರಿಯುತ್ತಿದೆ. ಭದ್ರಾ, ತುಂಗಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರು- ಹೊರನಾಡು- ಕಳಸ ರಸ್ತೆ ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆ ಭೀತಿ ಎದುರುಸುತ್ತಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ನೂರಾರು ಹಳ್ಳಿಗಳು ವಿದ್ಯುತ್ ಸಂಪರ್ಕ ಕೂಡ ಕಳೆದುಕೊಂಡು ಪರಿತಪಿಸುವಂತಾಗಿದೆ.

ಇನ್ನು ಮಳೆಯ ಅವಾಂತರದಿಂದ ರೋಸಿ ಹೋಗಿರುವ ಶೃಂಗೇರಿ ಭಾಗದ ರೈತರು ಮಳೆ ಆರ್ಭಟ ನಿಲ್ಲಿಸುವಂತ್ತೆ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿಯ ಬಳಿ ಹರಕೆ ಕಟ್ಟಿಕೊಂಡಿದ್ದಾರೆ. ಶೃಂಗೇರಿಯ ನರಸಿಂಹ ವನದಲ್ಲಿರುವ  ಜಗದ್ಗುರುಗಳ ನಿವಾಸಕ್ಕೆ ತೆರಳಿ ನೂರಾರು ರೈತರು ಹರಕೆ ಮಾಡಿಕೊಂಡಿದ್ದು ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಇನ್ನು ಜಗದ್ಗುರುಗಳಿಗೆ ಅರಿಕೆ ಮಾಡಿಕೊಂಡ್ರೆ ಮಳೆ ಕಡಿಮೆಯಾಗುವ ಪ್ರತೀತಿ ಇರೋದ್ರಿಂದ ರೈತರಿಂದ ಅರಿಕೆ ಮಾಡಿಕೊಳ್ಳಲಾಗಿದೆ, ಕಳೆದ ಜೂನ್ ನಲ್ಲೂ ಶೃಂಗೇರಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ನದಿ ತಟದಲ್ಲಿ ಜಗದ್ಗುರುಗಳು ಗಂಗೆ ಪೂಜೆ ಮಾಡುವ ಮೂಲಕ ಮಳೆ ಆರ್ಭಟ ನಿಲ್ಲಿಸಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹ ಭೀತಿ: ಗಂಜಿ ಕೇಂದ್ರ ಆರಂಭ