ದೇಶಾದ್ಯಂತ ಭ್ರಷ್ಟಾಚಾರ, ಖೋಟಾನೋಟು ಸೇರಿದಂತೆ ಆರ್ಥಿಕ ಕಂಟಕಗಳನ್ನ ಪರಿಹಾರ ಮಾಡಲು ಪ್ರಧಾನಮಂತ್ರಿ ನರೇಂದ್ರಮೋದಿ ನೋಟ್ ಬ್ಯಾನ್ ಮಾಡಿ ಹೊಸ ನೋಟುಗಳನ್ನ ಚಲಾವಣೆಗೆ ತಂದರು. ಆದರೆ, ಇದೀಗ ಹೊಸ ನೋಟುಗಳ ಖೋಟಾನೋಟು ದಂಧೆಯೂ ಸಹ ಶುರುವಾಗಿದೆ. ಹೌದು, ದಾಬಸ್ ಪೇಟೆ ಬಳಿ 2000 ರೂ. ಮುಖಬೆಲೆಯ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಸಹ ನಟಿಯನ್ನ ಹಿಡಿದು ಸಾರ್ವಜನಿಕರೇ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ..
ದಾಬಸ್ ಪೇಟೆ ಬಳಿ ಅಂಗಡಿಯೊಂದಕ್ಕೆ ಬಂದು 2000 ರೂ. ಖೋಟಾನೋಟು ಕೊಟ್ಟು ವಸ್ತುಗಳ ಖರೀದಿಗೆ ಯತ್ನಿಸಿದ್ದಾಳೆ. ಅಂಗಡಿಯಾತ ತನ್ನಲ್ಲಿದ್ದ ಮೆಶಿನ್`ನಲ್ಲಿ ಪರೀಕ್ಷಿಸಿದಾಗ ಖೋಟಾನೋಟು ಎಂದು ಗೊತ್ತಾಗಿದೆ. ಕೂಡಲೇ ನೋಟನ್ನ ವಾಪಸ್ ಪಡೆದ ಮಹಿಳೆ ತರಾತುರಿಯಾಗಿ ಹೊರನಡೆದಿದ್ದಾಳೆ. ಮಹಿಳೆಯರ ಚಲನವಲನ ಗಮನಿಸುತ್ತಿದ್ದ ಸ್ಥಳೀಯರು ಆಕೆಯನ್ನೇ ಫಾಲೋ ಮಾಡಿ ಹಿಡಿದಿದ್ದಾರೆ ಈ ಸಂದರ್ಭ ಮತ್ತೊಮ್ಮೆ ಇಂತಹ ತಪ್ಪು ಮಾಡಲ್ಲ ಬಿಟ್ಟುಬಿಡಿ ಎಂದು ಅಂಗಲಾಚಿದ್ದಾಳೆ. ಕಾಲು ಹಿಡಿದುಕೊಳ್ಳುತ್ತೇನೆ ಬೇಡಿಕೊಂಡಿದ್ದಾಳೆ. ಬಳಿಕ ಆಂಧ್ರಪ್ರದೇಶದಲ್ಲಿ ಖೋಟಾನೋಟು ಸಿಕ್ಕಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಬಂಧಿತ ಮಹಿಳೆ ಜೊತೆ 24 ಸಾವಿ ರೂ.ನಷ್ಟು ಖೋಟಾನೋಟುಗಳು ಪತ್ತೆಯಾಗಿವೆ. ಮಹಿಳೆಯ ಮೊಬೈಲ್`ನಲ್ಲಿದ್ದ ಜಾಡು ಹಿಡಿದಿರುವ ಪೊಲೀಸರು ಮತ್ತಷ್ಟು ಜನರ ಬೇಟೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.