Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ರಾ ಸಿಎಂ?

ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ರಾ ಸಿಎಂ?
ಚಿಕ್ಕಬಳ್ಳಾಪುರ , ಮಂಗಳವಾರ, 10 ಸೆಪ್ಟಂಬರ್ 2019 (11:35 IST)
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಕೆಗಳಿಗೆ ಅನುದಾನ ಕಡಿತ ಹಿನ್ನಲೆ ಸಿಎಂ ಬಿಎಸ್ ವೈ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ 6 ತಾಲೂಕುಗಳ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ 6 ತಾಲೂಕುಗಳ ಪೈಕಿ ಒಂದು ತಾಲೂಕಿಗೆ ಅನುದಾನ ನೀಡುವುದರ ಮೂಲಕ ಸಿಎಂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಸಿಎಂ ಬಿಎಸ್ ವೈ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಿಡಿಕಾರಿದ್ದಾರೆ.


ರಾಜ್ಯ ಸರ್ಕಾರ, ಚಿಕ್ಕಬಳ್ಳಾಪುರ ತಾಲೂಕಿಗೆ 95 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಉಳಿದ ತಾಲೂಕುಗಳಿಗೆ ಬಿಡುಗಡೆಯಾಗಿದ್ದ 252 ಕೋಟಿ ರೂ ಅನುದಾನ ಸ್ಥಗಿತ ಮಾಡಲಾಗಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ನೀಡಿದ್ದ 105 ಕೋಟಿಯಲ್ಲಿ 19 ಕೋಟಿ ರೂ. ಹಿಂಪಡೆಯಲಾಗಿದೆ. ಶಿಡ್ಲಘಟ್ಟ ಕ್ಷೇತ್ರಕ್ಕೆ ನೀಡಿದ್ದ 71ಕೋಟಿ ರೂ ಅನುದಾನ ಸ್ಥಗಿತ, ಚಿಂತಾಮಣಿ ಕ್ಷೇತ್ರಕ್ಕೆ ನೀಡಿದ್ದ 60 ಕೋಟಿ ಅನುದಾನ ಸ್ಥಗಿತ, ಗೌರಿ ಬಿದನೂರು  ಕ್ಷೇತ್ರಕ್ಕೆ ನೀಡಿದ್ದ 16 ಕೋಟಿ ಅನುದಾನ ಸ್ಥಗಿತ ಮಾಡಲಾಗಿದೆ. ಆದರೆ ಅನರ್ಹ ಶಾಸಕ ಕೆ,ಸುಧಾಕರ್ ಕ್ಷೇತ್ರಕ್ಕೆ ಮಾತ್ರ ಅನುದಾನ ಸ್ಥಗಿತಗೊಳಿಸಿಲ್ಲ ಎಂದು ಆರೋಪಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಂಗಪಟ್ಟಣದಲ್ಲಿ ಅಕ್ರಮ ಗಣಿಗಾರಿಕೆಗೆ ಬ್ರೇಕ್