ನಗರದಲ್ಲಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಗಳ ವಿರುದ್ಧ ಗರಂ ಅಗಿದ್ದು, ಓರ್ವ ಮುಖ್ಯ ಇಂಜನಿಯರ್‌ನ್ನು ಅಮಾನತು ಮಾಡಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ದತಾ ಕ್ರಮಗಳನ್ನು ಪರಿಶೀಲಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ, ಬೆಂಗಳೂರು ನಗರಾಭಿವೃದ್ದಿ ಸಚಿವ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್ ಮಂಜುನಾಥ ಮತ್ತು ಉಪಮೇಯರ್ ಹೇಮಲತಾ ಸೇರಿ ಹಲವು ಗಣ್ಯರು 3 ವೋಲ್ವೊ ವಾಹನದ ಮೂಲಕ ಬೆಂಗಳೂರು ನಗರ ಪ್ರದಕ್ಷಿಣೆ ಕಾರ್ಯಕ್ರಮ ಕೈಗೊಂಡಿದ್ದರು.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಮುಖ್ಯರಸ್ತೆ ಪರಿಶೀಲನೆ ನಡೆಸಿದ ಮಖ್ಯಮಂತ್ರಿ ಸಿದ್ದರಾಮಯ್ಯ, ಕಾಮಗಾರಿ ವಿಳಂಬವಾದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೆ ವೇಳೆ, ರಸ್ತೆ ಕಾಮಗಾರಿಗೆ ಸಂಬಂಧ ಪಟ್ಟ ಮುಖ್ಯ ಇಂಜನಿಯರ್ ರುದ್ರಮೂರ್ತಿಯವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಇಂಜನಿಯರ್ ತನ್ನ ಕಾರ್ಯವೈಖರಿ ಕುರಿತು ಸಮರ್ಥಿಸಿಕೊಳ್ಳಲು ಬಂದಾಗ ನಿನ್ನ ಸಂಸ್ಪೆಂಡ್ ಮಾಡಿದಿನಿ ಹೋಗಯ್ಯ ಎಂದು ಖಡಕ್ ಉತ್ತರ ನೀಡಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.