ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿ ಜೈಲು ಪಾಲಾಗಿದ್ದ ಸಿಎಂ ಆಪ್ತ ಕೆ.ಮರಿಗೌಡನ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ತನ್ನ ಆಪ್ತ ಮತೀನ್ ಶೇಠ್ ಜೊತೆಗೆ ಇಂದು ಬಿಡಿಎ ಕಚೇರಿಯಲ್ಲಿ ಪ್ರತ್ಯಕ್ಷರಾದರು.
ತನ್ನ ಆಪ್ತ ಮತೀನ್ ಶೇಠ್‌ಗೆ ಸಂಬಂಧಿಸಿದ ಜಮೀನಿನ ವ್ಯವಹಾರದ ಸಮಸ್ಯ ಪರಿಹರಿಸಲು ಇಂದು ಸಿಎಂ ಆಪ್ತ ಕೆ.ಮರಿಗೌಡ ಬಿಡಿಎ ಕಚೇರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿ ಜೈಲು ಸೇರುವ ಮೊದಲು ಮರಿಗೌಡ ದಿನಕ್ಕೆ ನಾಲ್ಕು ಬಾರಿ ಬಿಡಿಎ ಕಚೇರಿಗೆ ಭೇಟಿ ನೀಡುತ್ತಿದ್ದರು.
ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಆಪ್ತ ಕೆ.ಮರಿಗೌಡ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದರು. ಈ ಕುರಿತು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮರಿಗೌಡ ತಲೆ ಮರೆಸಿಕೊಂಡಿದ್ದ.
ಅಗಸ್ಟ್ 6 ರಂದು ಕೆ.ಮರಿಗೌಡ ನಜರ್‌ಬಾದ್ ಪೊಲೀಸ್ ಠಾಣೆಗೆ ಶರಣಾಗಿದ್ದು, ಜಾಮೀನು ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಜೈಲುವಾಸ ಅನುಭವಿಸಿದ ನಂತರ ಬಿಡುಗಡೆ ಹೊಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ