ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ವಿಐಪಿ ಟ್ರೀಟ್ ಮೆಂಟ್ ನೀಡಲು ಸ್ವತಃ ಸಿಎಂ ಸೂಚಿಸಿದ್ರಾ?
ಈ ಬಗ್ಗೆ ತನಿಖಾಧಿಕಾರಿಗಳ ಮುಂದೆ ಡಿಜಿಪಿ ಸತ್ಯನಾರಾಯಣ ರಾವ್ ನೀಡಿದ ಹೇಳಿಕೆ ವಿವಾದಕ್ಕೀಡುಮಾಡಿದೆ. ಶಶಿಕಲಾಗೆ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ನಿಯೋಜಿಸಿತ್ತು. ಈ ಬಗ್ಗೆ ಡಿಜಿಪಿಯವರನ್ನು ವಿಚಾರಣೆ ನಡೆಸಿದಾಗ ಸಿಎಂ ಸೂಚನೆಯಂತೆ ಶಶಿಕಲಾಗೆ ಹಾಸಿಗೆ ದಿಂಬು ನೀಡಲಾಗುತ್ತಿದೆ ಎಂದಿದ್ದರು.
ಈ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ‘ತಮಿಳುನಾಡಿನಿಂದ ಬಂದ ನಿಯೋಗವೊಂದು ನನ್ನ ಬಳಿ ಶಶಿಕಲಾಗೆ ಕನಿಷ್ಠ ಸೌಲಭ್ಯವನ್ನೂ ಜೈಲಿನಲ್ಲಿ ನೀಡಲಾಗಿಲ್ಲ ಎಂದಿತ್ತು. ಹೀಗಾಗಿ ಡಿಜಿಪಿ ಸತ್ಯನಾರಾಯಣ ರಾವ್ ರನ್ನು ಕರೆದು ಜೈಲಿನ ಮ್ಯಾನ್ಯುವಲ್ ಪ್ರಕಾರ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಬಹುದು ಎಂದಿದ್ದೆ ಅಷ್ಟೇ. ವಿಶೇಷ ಸೌಲಭ್ಯ ಕೊಡಿ ಎಂದಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ