ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಮಾಜಿ ಸಚಿವ ಅಂಬರೀಷ್ ಮನೆಗೆ ತೆರಳಿ ಮಾತುಕತೆ ನಡೆಸಿದೆ. ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಸಿಎಂ ಸಾಥ್ ನೀಡಿದ್ದರು. ಅಂಬಿ ನಿವಾಸದಲ್ಲಿಯೇ ಸಿಎಂ ಟೀಮ್ ಭೋಜನವನ್ನೂ ಮಾಡಿದೆ.ಗಳಲ್ಲಿ ಭಾಗವಹಿಸಿರಲಿಲ
ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಬೇಸರಗೊಂಡಿದ್ದ ಅಂಬರೀಷ್ ಅಷ್ಟಾಗಿ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಉಪಚುನಾವಣೆಯ ಪ್ರಚಾರಕ್ಕೂ ಅಂಬಿ ಬಂದಿರಲಿಲ್ಲ. ಈ ಮಧ್ಯೆ, ಅಂಬರೀಷ್ ಬಿಜೆಪಿ ಸೇರಲಿದ್ದಾರೆ ಎಂಬ ೂಹಾಪೋಹಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎನ್ನಲಾಗಿದೆ. ಭೋಜನದ ನೆಪದಲ್ಲಿ ನಡೆದ ಈ ಮಾತುಕತೆ ವೇಳೆ ಹಲವು ರಾಜಕೀಯ ವಿಚಾರಗಳ ಚರ್ಚೆ ನಡೆದಿದೆ ಎನ್ನಲಾಗಿದೆ.
ಸದ್ಯ, ಎಸ್.ಎಂ. ಕೃಷ್ಣ ಬಿಜೆಪಿ ಸೇರಿರುವುದರಿಂದ ಮಂಡ್ಯದಲ್ಲಿ ಕಾಂಗ್ರೆಸ್`ನ ಪ್ರಭಾವಿ ನಾಯಕರಿಲ್ಲ. ಕೆಲ ನಾಯಕರೂ ಜೆಡಿಎಸ್ ಕಡೆ ವಾಲಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ಅಂಬರೀಷ್ ಅವರ ಮನವೊಲಿಸಿ ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಬಲಗೊಳಿಸುವ ಯತ್ನ ನಡೆದಿದೆ ಎನ್ನಲಾಗಿದೆ. ಇದಕ್ಕಾಗಿ ಅಂಬರೀಷ್`ಗೆ ಮತ್ತೆ ಸಚಿವ ಸ್ಥಾನ ನೀಡಲಾಗುತ್ತಾ..? ಎಂಬ ಪ್ರಶ್ನೆಗಳೂ ಏಳುತ್ತಿವೆ.