ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದ ಪ್ರಧಾನಿ ಮೋದಿ, 15 ರೂಪಾಯಿ ಕೂಡಾ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟ್‌ಬ್ಯಾನ್ ನಂತರ ಸಾಮಾನ್ಯ ಜನತೆ ಅತೀವ ಸಂಕಷ್ಟ ಅನುಭವಿಸಿ ಹಲವರು ಸಾವನ್ನಪ್ಪಿದರು. ಆದರೆ, ಕಪ್ಪು ಹಣ ಹೊಂದಿರುವ ಯಾವೊಬ್ಬ ಶ್ರೀಮಂತ ಕೂಡಾ ಸಾವನ್ನಪ್ಪಲಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಮೋದಿ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ ಬಡವರು, ರೈತರು, ದೀನ ದಲಿತರು, ಶೋಷಿತರು, ಮಹಿಳೆಯರು, ಅಲ್ಪಸಂಖ್ಯಾತರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಯುಪಿಎ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಜನಧನ್ ಯೋಜನೆ, ಜಿಎಸ್‌ಟಿ, ಆಧಾರ ಕಾರ್ಡ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ತಮ್ಮದೇ ಯೋಜನೆಗಳು ಎಂದು ಪ್ರಧಾನಿ ಮೋದಿ ಸರಕಾರ ಬಿಂಬಿಸುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರದ ಸಾಧನೆ ಶೂನ್ಯ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊ
ಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.