ಕಾಂಗ್ರೆಸ್ ಪಕ್ಷದವರು ಒಂದು ವೋಟಿಗೆ ನಾಲ್ಕು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎನ್ನುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ್ದೆ ಬಿಜೆಪಿಯವರು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದವರು ಒಂದು ವೋಟಿಗೆ ನಾಲ್ಕು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎನ್ನುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಆಪರೇಶನ್ ಕಮಲ ಮಾಡಿದವರಾರು ಎನ್ನುವುದು ಜನತೆಯ ಮುಂದೆ ಉತ್ತರಿಸಲಿ ಎಂದು ಸವಾಲ್ ಹಾಕಿದರು.
ಮತದಾರರಿಗೆ ಭ್ರಷ್ಟಾಚಾರ, ಆಮಿಷ. ಜಾತಿ, ಕೋಮುವಾದದ ಬೀಜ ಬೀತ್ತಿದವರೇ ಬಿಜೆಪಿಯವರು.ಆದರೆ, ಮತದಾರರು ಜಾಗೃತರಾಗಿದ್ದು, ಇಂತಹ ಪೊಳ್ಳು ಪ್ರಚಾರಗಳಿಗೆ ಕಿವಿಗೊಡುವುದಿಲ್ಲ. ಕಾಂಗ್ರೆಸ್ ಸರಕಾರ ಅಭಿವೃದ್ಧಿಪರವಾಗಿದೆ ಎನ್ನುವುದು ಅರಿತಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎನ್ನುವ ವರದಿಗಳಿಂದ ಬಿಜೆಪಿ ನಾಯಕರು ಹತಾಷರಾಗಿದ್ದು ಮನಬಂದಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.