ಸಿಎಂ ಜೇಷ್ಠಪುತ್ರ ರಾಕೇಶ್ ನನ್ನ ಹಿರಿಯ ಮಗನಂತೆ ಇದ್ದ. ನನ್ನನ್ನು ಅಪ್ಪ ಎಂದು ಕರೆಯುತ್ತಿದ್ದ. ಆತನ ಸಾವು ದುಃಖ ತಂದಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಪಾರ್ಥಿವ ಶರೀರವನ್ನು ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದ್ದು, ಮೈಸೂರು ಹೊರವಲಯದ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಬೆಲ್ಜಿಯಂ ಪ್ರವಾಸದಲ್ಲಿದ್ದ ಅವರು ಪ್ಯಾಂಕ್ರಿಯಸ್ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಪಲಕಾರಿಯಾಗದೆ ಕೊನೆ ಉಸಿರೆಳದಿದ್ದರು.
ಪುತ್ರನ ಆರೋಗ್ಯ ವಿಚಾರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಬೆಲ್ಜಿಯಂಗೆ ತೆರಳಿದ್ದರು. ಆದರೆ, ವಿಧಿಯ ಅಟ್ಟಹಾಸಕ್ಕೆ ರಾಕೇಶ್ ಸಿದ್ದರಾಮಯ್ಯ ಬಲಿಯಾಗಿದ್ದರು.
ವೈದ್ಯರ ತಂಡದೊಂದಿಗೆ ಸಿದ್ದರಾಮಯ್ಯನವರ ಪತ್ನಿ ಕೂಡಾ ಬೆಲ್ಜಿಯಂಗೆ ತೆರಳಿ ಪುತ್ರನ ಆರೋಗ್ಯ ನೋಡಿಕೊಂಡಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.