ಮೈಸೂರು : ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯವತಿ ಅವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತವರುನಾಡಲ್ಲೇ ಮುಖಭಂಗವಾಗಿದೆ.
ಭಾಗ್ಯವತಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್- ಬಿಜೆಪಿಯ ಬೆಂಬಲ ದೊರೆತಿದ್ದು, ಗದ್ದಲಗಳ ನಡುವೆಯೇ ಚುನಾವಣೆ ನಡೆದರೂ ಕೊನೆಗೆ ಭಾಗ್ಯವತಿ ಅವರು ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೀಸಲಾತಿ ಅಸ್ತ್ರ ಬಳಸಿ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಪ್ಲ್ಯಾನ್ ಮಾಡಿದ್ದು, ಈಗ ಅವರ ಪ್ಲ್ಯಾನ್ ಬುಡಮೇಲಾಗಿದೆ. ಜೆಡಿಎಸ್- ಬಿಜೆಪಿ ಪ್ರತಿತಂತ್ರದ ಮುಂದೆ ಕಾಂಗ್ರೆಸ್ ಪಾಲಿಕೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ