Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

140 ಶಾಸಕರ ಸಂಖ್ಯೆ 65ಕ್ಕಿಳಿದಾಗ ಕೃಷ್ಣಗೆ ದೂರಾಲೋಚನೆ ಇರಲಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ

140 ಶಾಸಕರ ಸಂಖ್ಯೆ 65ಕ್ಕಿಳಿದಾಗ ಕೃಷ್ಣಗೆ ದೂರಾಲೋಚನೆ ಇರಲಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ
ನಂಜನಗೂಡು , ಮಂಗಳವಾರ, 4 ಏಪ್ರಿಲ್ 2017 (11:33 IST)
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ 4 ದಿನ ಬಾಕಿ ಉಳಿದಿರುವಂತೆ ಪರಸ್ಪರ ವಾಕ್ಸಮರ ಸಹ ಜೋರಾಗಿದೆ. ಈ ರಾಜ್ಯವನ್ನ ಎಲ್ಲಿಗೆ ಕೊಂಡೊಯ್ಯುತ್ತಿದ್ದೇವೆ ಎಂಬುದರ ಬಗ್ಗೆ ದೂರಾಲೋಚನೆ ಇಲ್ಲದ ಸರ್ಕಾರವಿದು ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರವನ್ನ ಟೀಕಿಸಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಎಸ್.ಎಂ. ಕೃಷ್ಣಗೆ ತುಂಬಾ ಅನುಭವ, ದೂರಾಲೋಚನೆ ಇದೆ. 140 ಶಾಸಕರಿದ್ದಾಗ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ನಂತರದ ಚುನಾವಣೆಯಲ್ಲಿ ಶಾಸಕರ ಸಂಖ್ಯೆ 65ಕ್ಕಿಳಿದಾಗ ಅವರ ದೂರಾಲೋಚನೆ ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಕೃಷ್ಣ ಸಂಪುಟದ 30 ಸಚಿವರು ಸೋತಾಗ ದೂರಾಲೋಚನೆ ಎಲ್ಲಿಹೋಗಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಾತಿನ ಸಮರದ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ ಸಿಮ್ ಆಯ್ತು.. ಇನ್ನು ಜಿಯೋ ಡಿಟಿಎಚ್ ಸೇವೆ ಶೀಘ್ರದಲ್ಲೇ ನಿಮ್ಮ ಮುಂದೆ!