Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಹೈಕಮಾಂಡ್‌ಗೆ ಹಣ ರವಾನಿಸಿದ್ದಕ್ಕೆ ದಾಖಲೆಗಳಿವೆ: ಯಡಿಯೂರಪ್ಪ

ಸಿಎಂ ಹೈಕಮಾಂಡ್‌ಗೆ ಹಣ ರವಾನಿಸಿದ್ದಕ್ಕೆ ದಾಖಲೆಗಳಿವೆ: ಯಡಿಯೂರಪ್ಪ
ಹುಬ್ಬಳ್ಳಿ , ಶುಕ್ರವಾರ, 3 ಮಾರ್ಚ್ 2017 (13:13 IST)
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನರ ತೆರಿಗೆಯಿಂದ ಸಂಗ್ರಹವಾದ 500-600 ಕೋಟಿ ರೂಪಾಯಿಗಳನ್ನು ಹೈಕಮಾಂಡ್‌ಗೆ ರವಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. 
 
ಸಿಎಂ ನೇತೃತ್ವದ ಸರಕಾರ ಕಾಂಗ್ರೆಸ್ ಹೈಕಮಾಂಡ್ ಹಣ ರವಾನಿಸಿದ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಗುಡುಗಿದ್ದಾರೆ.
 
ಮುಂಬರುವ ಕೆಲ ದಿನಗಳಲ್ಲಿ ಸಿಎಂ ಮತ್ತು ಅವರ ಸಹದ್ಯೋಗಿ ಸಚಿವರ ಭ್ರಷ್ಟಾಚಾರವನ್ನು ಒಂದೊಂದಾಗಿ ಬಯಲಿಗೆಳೆಯುತ್ತೇನೆ. ಡೈರಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಮತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ರಾಜ್ಯದ ಬರಪರಿಸ್ಥಿತಿ ನಿರ್ವಹಣೆಯಲ್ಲೂ ರಾಜ್ಯ ಸರಕಾರ ವಿಫಲವಾಗಿದೆ. ರೈತರು ಸಂಕಷ್ಟದಲ್ಲಿದ್ದರೂ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಸರಕಾರದ ರೈತ ವಿರೋಧ ಧೋರಣೆ ವಿರೋಧಿಸಿ ಮಾರ್ಚ್ 9 ರಂದು ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರಕಾರವನ್ನು ಎಚ್ಚರಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹಣ ಪಡೆದಿಲ್ಲವೆಂದಾದ್ರೆ ಸಿಬಿಐಗೆ ವಹಿಸಲು ಹಿಂಜರಿಕೆ ಯಾಕೆ: ಈಶ್ವರಪ್ಪ