Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯಪಾಲರಿಗೆ ಈಗ ಜ್ಞಾನದೋಯವಾಗಿದೆ ಎಂದ ಸಿಎಂ

ರಾಜ್ಯಪಾಲರಿಗೆ ಈಗ ಜ್ಞಾನದೋಯವಾಗಿದೆ ಎಂದ ಸಿಎಂ
ಬೆಂಗಳೂರು , ಶುಕ್ರವಾರ, 19 ಜುಲೈ 2019 (16:17 IST)
ರಾಜ್ಯ ಸರಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ ವಿರೋಧ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಅಂತ ಸಿಎಂ ದೂರಿದ್ದಾರೆ. ಇದೇ ವೇಳೆ ರಾಜ್ಯಪಾಲರ ಕ್ರಮದ ವಿರುದ್ಧ ಸಿಎಂ ಕಿಡಿಕಾರಿದ್ದಾರೆ. 

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನರೇಗಾ ಯೋಜನೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 2000 ಕೋಟಿ ಬಂದಿಲ್ಲ. ಆದರೂ ವಿನಾಕಾರಣ ಸರಕಾರದ ವಿರುದ್ಧ ದೂರುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಪರ್ಸೆಂಟೇಜ್ ವ್ಯವಸ್ಥೆ ಜಾರಿಗೆ ತಂದೋರು ಯಾರು ಎನ್ನೋದು ಎಲ್ರಿಗೂ ಗೊತ್ತಿದೆ. ರಾಜ್ಯಪಾಲರಿಗೆ ಈಗ ಜ್ಞಾನೋದಯವಾಗಿದೆ. ನಮ್ಮ ಶಾಸಕರನ್ನು ಕುದುರೆ ವ್ಯಾಪಾರ ಮಾಡೋವಾಗ ಗಮನಿಸದ ರಾಜ್ಯಪಾಲರು ಈಗ ಸರಕಾರದ ವಿರುದ್ಧ ತುರ್ತಾಗಿ ಪತ್ರ ಬರೆಯೋದ್ರಲ್ಲಿ ಕಾಳಜಿ ವಹಿಸುತ್ತಿದ್ದಾರೆ ಎಂದ್ರು.

ರಾಜ್ಯಪಾಲರಿಗೆ ಈಗ ಜ್ಞಾನದೋಯವಾಗಿದೆ. ಕಳೆದು ಹತ್ತು ದಿನಗಳಿಂದ ಆಗಿರಲಿಲ್ಲ ಅಂತ ಸಿಎಂ ಟೀಕೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂಗೆ ರಾಜ್ಯಪಾಲರಿಂದ 2 ನೇ ಡೆಡ್ ಲೈನ್