ಸಿಎಂ ಗಮನಕ್ಕೆ ತರದೇ ಅವರ ಕಾರಿನ ರೆಡ್ ಲೈಟ್ ತೆಗೆದಿರುವ ಬಗ್ಗೆ ವರದಿಯಾಗಿದೆ. ಮಾಧ್ಯಮಗಳು ಕಾರಿನಲ್ಲಿ ಕೆಂಪು ದೀಪ ಇಲ್ಲದಿರುವ ಬಗ್ಗೆ ಕೇಳಿದಾಗ ಅವರ ಗಮನಕ್ಕೆ ಬಂದಿದೆ. ಕೂಡಲೇ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಸಿಎಂ ಕೆಂಪು ದೀಪ ತೆಗೆದದ್ದು ಯಾರು ಮತ್ತು ಏಕೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರಸರ್ಕಾರದಿಂದ ಆದೇಶವಿರುವುದರಿಂದ ಕೆಂಪು ದೀಪ ತೆಗೆದಿದ್ದಾಗಿ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಯಾವ ಆದೇಶ ಎಂದು ಮತ್ತೆ ಸಿಎಂ ಸಿಬ್ಬಂದಿಗೆ ಪ್ರಶ್ನಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ತಾನೆ ವಿವಿಐಪಿ ಸಂಸ್ಕೃತಿಯನ್ನ ತೆಗೆದು ಹಾಕಲು ರಾಷ್ಟ್ರಪತಿ, ಪ್ರಧಾನಿ, ಸಿಜೆಐ ಸೇರಿದಂತೆ ದೇಶದ ಎಲ್ಲ ಗಣ್ಯ, ಅತಿಗಣ್ಯ ವ್ಯಕ್ತಿಗಳು ಕೆಂಪು ದೀಪ ಬಳಸುವಂತಿಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸಂಪುಟ ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ