ರಾಜ್ಯದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಹೀಗಂತ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪೈಪೋಟಿ ಮೇಲೆ ಗುತ್ತಿಗೆದಾರರು ಬಿಡ್ ಮಾಡ್ತಾರೆ. ಆದ್ರೆ ಗುಣಾತ್ಮಕವಾಗಿ ಕೆಲಸ ಆಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.
ಈ ಹಿಂದೆ ಗುಲ್ಬರ್ಗಾದಲ್ಲಿ ಹೈ ಕೋರ್ಟ್ ಪೀಠ ಕಟ್ಟಡ ನಿರ್ಮಾಣ ಮಾಡುವಾಗ 29% ಜಾಸ್ತಿ ಬಿಡ್ ಮಾಡಿದ್ರು. ಆದ್ರೆ ಲೋಕೋಪಯೋಗಿ ಸಚಿವರಾಗಿದ್ದ ಹೆಚ್. ಡಿ. ರೇವಣ್ಣ ಬಿಟ್ಟಿರಲಿಲ್ಲ. ಹೀಗೆ ಗುಣಾತ್ಮಕ ವಿಚಾರಗಳು ಇಲಾಖೆಯಲ್ಲಿ ನಡೆಯಬೇಕು ಎಂದರು.
ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈಗ ನಡೆಯುತ್ತಿರುವ ಕಾಮಗಾರಿಗಳು 6-7 ತಿಂಗಳಲ್ಲಿ ಪೂರ್ಣ ಮಾಡಬೇಕು. ಹೀಗಂತ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಿಳಿಸಿದ್ರು.