Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ
bangalore , ಸೋಮವಾರ, 20 ಡಿಸೆಂಬರ್ 2021 (22:04 IST)
ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ವದಂತಿ ಹಬ್ಬಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಯಾವುದೇ ಅಧಿಕಾರ ಶಾಶ್ವತವಲ್ಲ ಎನ್ನುವ ಹೇಳಿಕೆ ಊಹಾಪೋಹಗಳಿಗೆ ನೀರೆರೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾನುವಾರ ಮಾತಾಡುತ್ತಾ ಭಾವುಕರಾಗಿದ್ದಾರೆ. ಅಧಿಕಾರದ ಎಲ್ಲಾ ಸ್ಥಾನಗಳು ತಾತ್ಕಾಲಿಕ, ಯಾವುದು ಶಾಶ್ವತವಲ್ಲ ಎಂದಿದ್ದಾರೆ.
“ಯಾವುದೂ ಶಾಶ್ವತವಲ್ಲ, ಈ ಜೀವನ ಶಾಶ್ವತವಲ್ಲ, ನಾವು ಎಷ್ಟು ದಿನ ಬದುಕುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರದ ಎಲ್ಲಾ ಹುದ್ದೆಗಳೂ ಶಾಶ್ವತವಲ್ಲ. ಈ ಬಗ್ಗೆ ನಾವು ನಿರಂತರವಾಗಿ ಜಾಗೃತರಾಗಿರಬೇಕು. ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ, ಇಲ್ಲಿ ಬಂದಾಗ ಕೇವಲ ಬಸವರಾಜ ಬೊಮ್ಮಾಯಿ” ಎಂದು ಲಿಂಗಾಯತ ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
“ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರದಿಂದಲೇ ನಾನು ರಾಜ್ಯದ ಸಿಎಂ ಆಗಿದ್ದೇನೆ. ನಾನು ಯಾವಾಗಲೂ ಹೇಳುವ ಒಂದು ವಿಷಯವೆಂದರೆ, ನಾನು ಈ ಕ್ಷೇತ್ರದಿಂದ ಹೊರಗಿರುವಾಗ ನಾನು ಗೃಹ ಸಚಿವ, ಜಲಸಂಪನ್ಮೂಲ ಸಚಿವನಾಗಿರಬಹುದು. ಆದರೆ, ನಾನು ಇಲ್ಲಿಗೆ ಹಿಂತಿರುಗಿದಾಗಲೆಲ್ಲಾ ನಾನು ಬಸವರಾಜ ಬೊಮ್ಮಾಯಿ ಮಾತ್ರ” ಎಂದಿದ್ದಾರೆ.
“ನಿಮ್ಮ ಮನೆಗೆ ಬಂದಾಗ ನೀವು ನನಗೆ ರೊಟ್ಟಿ ತಿನ್ನಿಸಿದ್ದೀರಿ, ಅದನ್ನು ಎಂದಿಗೂ ಮರೆಯುವುದಿಲ್ಲ. ನಾನು ಯಾವುದೇ ಕೆಲಸ ಮಾಡಿದರೂ ನಿಮಗೆ ಸದಾ ಋಣಿಯಾಗಿರುತ್ತೇನೆ. ನನಗೆ ಯಾವುದೇ ದೊಡ್ಡ ಆಸೆಗಳಿಲ್ಲ. ಆದರೆ ನನ್ನ ಕ್ಷೇತ್ರದ ಜನರ ಪ್ರೀತಿಗೆ ಸದಾ ಪಾತ್ರನಾಗಬೇಕು ಎಂದು ಬಯಸುತ್ತೇನೆ” ಎಂದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಈ ವರ್ಷದ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಬೊಮ್ಮಾಯಿ ಅವರ ಈ ಹೇಳಿಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರವಾಧಿಯಿರುವ ಸುಮಾರು 16 ತಿಂಗಳಲ್ಲಿ ಮತ್ತೊಂದು ನಾಯಕತ್ವ ಬದಲಾವಣೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.
ಒಟ್ಟಾರೆ 5 ತಿಂಗಳ ಕಾಲ ಅಧಿಕಾರ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಇಷ್ಟರಲ್ಲೇ ಅಧಿಕಾರ ಶಾಶ್ವತವಲ್ಲ ಎಂಬ ಮಾತುಗಳನ್ನಾಡುತ್ತಿರುವುದು ಹೈಕಮಾಂಡ್‌ನಿಂದ ಯಾವುದಾದರೂ ಸೂಚನೆ ಬಂದಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಇಂದು 6563 ಕೋವಿಡ್ ಪ್ರಕರಣ ಪತ್ತೆ ; 132 ಸಾವು