ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯುವ ಮೇಳವನ್ನ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ರು.
ಮೇಳದಲ್ಲಿ 300 ಕ್ಕೂ ಹೆಚ್ಚು ವಸ್ತುಪ್ರದರ್ಶನ ಮಳಿಗೆಗಳನ್ನ ಏರ್ಪಡಿಸಲಾಗಿದೆ.ಸಿರಿದಾನ್ಯಗಳ ಪ್ರದರ್ಶನ,ಸಾವಯುವ ಕೃಷಿ,ನೈಸರ್ಗಿಕ ಕೃಷಿ ಬೀಜ ಸಂರಕ್ಷಣೆಗೆ ಸಂಬಂಧಿಸಿದ ಮಳಿಗೆಗಳ ಪ್ರದರ್ಶನ ಮಾಡಲಾಗಿದ್ದು,ಮೇಳದಲ್ಲಿ ಸಿರಿದಾನ್ಯದ ಮೇಲೆ ಅಂತರಾಷ್ಟ್ರೀಯ ಮಟ್ಟದ ಚರ್ಚೆ ಕೂಡ ನಡೆಯಲಿದೆ.15 ಕ್ಕೂ ಹೆಚ್ಚು ವೈವಿದ್ಯಮಯ ತಿನಿಸು ಮಳಿಗೆಗಳು,ಕರ್ನಾಟಕದ ರೈತರಿಗಾಗಿ ಕರ್ನಾಟಕ ಪೆವಿಲಿಯನ್ ಸ್ಥಾಪನೆ ಸೇರಿದಂತೆ ಸಿರಿಧಾನ್ಯ ನವೋಧ್ಯಮಿಗಳು,ಸಾವಯುವ ಒಕ್ಕೂಟವನ್ನ ಏರ್ಪಡಿಸಲಗಿದೆ.ಕೃಷಿ ಇಲಾಖೆ,ಕೃಪಿ ವಿಶ್ವವಿದ್ಯಾನಿಲಯಗಳು,ರೈತ ಉತ್ಪಾದಕಾ ಸಂಸ್ಥೆಗಳಿಗೆ ಕರ್ನಾಟಕ ಪೆವಿಲಿಯನ್ ಅಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು,ಉತ್ಪಾದಕರು-ಮಾರುಕಟ್ಟೆಗಾರ ಸಭೆಗೆ ಮೇಳದಲ್ಲಿ ಅವಕಾಶ ಮಾಡಿಕೊಡಲಾಗಿದೆ.