ಗಣರಾಜ್ಯೋತ್ಸವ ಹಿನ್ನಲೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ.ಈ ಬಾರಿಯೂ ಅದ್ದೂರಿ ಫಲಪುಷ್ಪಪ್ರದರ್ಶನಕ್ಕೆ ಸಸ್ಯಕಾಶಿ ಸಿದ್ದಗೊಂಡಿದೆ.ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸುತ್ತಿದೆ.ಲಾಲ್ ಬಾಗ್ ನಲ್ಲಿ 1,500 ವರ್ಷಗಳ ಬೆಂಗಳೂರು ಇತಿಹಾಸದ ಚಿತ್ರಣ ಸೃಷ್ಠಿಯಾಗಲಿದೆ.ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿ ಗೋಪುರ ಅನಾವರಣವಾಗಲಿದ್ದು,ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್ ಗಳು ಕಂಗೊಳಸಲಿದೆ ಫಲಪುಷ್ಪ ಪ್ರದರ್ಶನವನ್ನ 10 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ರು.ಇಂದಿನಿಂದ 10 ದಿನ ಜ. ಯಿಂದ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.