ಹೊಸ ವರ್ಷಕ್ಕೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾದರಿಯಾಗಿದ್ದಾರೆ.. ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ವಿಶ್ ಮಾಡ್ತಾರೆ. ಈ ಹಿನ್ನೆಲೆ ಹೊಸ ವರ್ಷಕ್ಕೆ ವಿಶ್ ಮಾಡಲು ಬರುವ ಕಿರಿಯ ಅಧಿಕಾರಿಗಳಿಗೆ ಹೂಗೂಚ್ಚ, ಬೊಕ್ಕೆ, ಸಿಹಿತಿನಿಸು ನೀಡುವ ಬದಲು ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಕಮಿಷನರ್ ಬಿ.ದಯಾನಂದ ಹೇಳಿದ್ದಾರೆ.
ಹೂಗುಚ್ಚ, ಸಿಹಿತಿನಿಸು ನೀಡಿ ಶುಭಾಶಯ ಕೋರುವುದು ವಾಡಿಕೆ. ಎಸಿಪಿ ಮತ್ತು ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳ ವರ್ಚ್ಯುಯಲ್ ಮೀಟಿಂಗ್ನಲ್ಲಿ ಹೂಗೂಚ್ಚ ಮತ್ತು ಸಿಹಿತಿನಿಸು ತರದಂತೆ ಆಯುಕ್ತರು ಸೂಚಿಸಿದ್ರು. ಹೂಗುಚ್ಚ ಸುಖಾಸುಮ್ಮನೆ ವ್ಯರ್ಥವಾಗುತ್ತೆ, ಇದ್ರಿಂದ ಯಾರಿಗೂ ಉಪಯೋಗವಿಲ್ಲ.
ಆ ಹಣವನ್ನ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿತಿನಿಸು ಅಥವಾ ಊಟಕ್ಕೆ ವ್ಯಯಿಸಿ ಎಂದು ಸಲಹೆ ನೀಡಿದ್ದಾರೆ. ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ, ಪೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗಬಹುದು ಎಂದು ಸಲಹೇ ನೀಡಿದ್ದಾರೆ.